ರಾಧಿಕಾ ಕುಮಾರಸ್ವಾಮಿ ಮನದಿಚ್ಚೆಯನ್ನು ಈಡೇರಿಸ್ತಾರಾ ದರ್ಶನ್?

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವಾಯ್ತು ತಮ್ಮ ಪಾಡಾಯ್ತು ಎಂದು ಸಿನಿಮಾ, ತನ್ನ ಖಾಸಗಿ ಜೀವನದಲ್ಲಿ , ಅಭಿಮಾನಿಗಳ ಜೊತೆಗೆ ಬ್ಯುಸಿ ಇದ್ದವರು.‌ ಸಿನಿಮಾ, ಫ್ಯಾಮಿಲಿ, ಅಭಿಮಾನಿಗಳು ಬಿಟ್ಟರೆ ಫಾರ್ಮ್ ಹೌಸ್, ಸಫಾರಿಯಲ್ಲಿ ದಚ್ಚು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.
ಎಲೆಕ್ಷನ್ ಬಂದಾಗ ಆಗಾಗ ಒಂದು ದಿನ ಆತ್ಮೀಯೆ ಪರ ಪ್ರಚಾರ ಮಾಡುತ್ತಿದ್ದರು. ರೆಬೆಲ್ ಸ್ಟಾರ್ ಅಂಬರೀಶ್ ಅವರ ಪರ ಪ್ರಚಾರ ಮಾಡುತ್ತಿದ್ದರು, ಅವರೊಡನೆ ಓಡಾಡುತ್ತಿದ್ದರೂ ರಾಜಕೀಯವಾಗಿ ಅಷ್ಟೇನು ಸದ್ದು ಮಾಡಿರಲಿಲ್ಲ. ಆದರೆ, ಈ ಬಾರಿ ಲೋಕಸಭಾ ಚುನಾವಣೆಯಿಂದ ದರ್ಶನ್ ರಾಜಕೀಯಕ್ಕೂ ತಳಕು ಹಾಕಿಕೊಂಡಿದ್ದಾರೆ. ಸುಮಲತಾ ಅಂಬರೀಶ್ ಅವರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಿದರು.‌ ಆರಂಭದಿಂದಲೂ ಸಮಲತಾ ಅವರ ಪರ ಮನೆ ಮಕ್ಕಳಾಗಿ ದರ್ಶನ್ ,ಯಶ್ ಕೆಲಸ ಮಾಡಿದರು.
ಸುಮಲತಾ ಅಂಬರೀಶ್ ಅವರ ಎದುರಾಳಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಗ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಗಿದ್ದರಿಂದ ಇಡೀ ರಣಕಣ ಕಾವೇರಿತ್ತು.
ಸುಮಲತಾ ಅವರ ಪರ ನಿಂತ ದರ್ಶನ್ , ಯಶ್ ವಿರುದ್ಧ ಕುಮಾರಸ್ವಾಮಿ ಕೂಡ ಕೆಂಡಾಮಂಡಲರಾಗಿದ್ದರು .‌ಇವೆಲ್ಲಾ…ಮತ್ತು ಸುಮಲತಾ ಈಗ ಗೆದ್ದಿರುವುದು ಹಳೆಯ ವಿಚಾರ.‌
ಈಗಿನ ಬಿಸಿ ಬಿಸಿ ಸುದ್ದಿ ಎಂದರೆ ಕುಮಾರಸ್ವಾಮಿ ಅವರ ಪತ್ನಿ ರಾಧಿಕಾ ಕುಮಾರಸ್ವಾಮಿ ದರ್ಶನ್ ಅವರ ಬಗ್ಗೆ ಮಾತಾಡಿರುವುದು.‌


ರಾಧಿಕಾ ಕುಮಾರಸ್ವಾಮಿ ಅವರು ಅನಾಥರು ಮತ್ತು ಮಂಡ್ಯ ಎಂಬ ಎರಡು ಸಿನಿಮಾಗಳಲ್ಲಿ ದರ್ಶನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿ ಕೊಂಡಿದ್ದರು. ಈಗ ರಾಧಿಕಾ ದರ್ಶನ್ ಬಗ್ಗೆ ಮಾತಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಸುದ್ದಿಗಾರರ ಜೊತೆ ಮಾತಾಡಿದರು. ಅನೇಕ ವಿಚಾರಗಳನ್ನು ಹಂಚಿಕೊಂಡರು. ಅದರಲ್ಲಿ ದರ್ಶನ್ ಬಗ್ಗೆ ಕೂಡ.

ಸುದ್ದಿಗಾರರು ದರ್ಶನ್ ಜೊತೆ ನಟಿಸುವ ಬಗ್ಗೆ ಮಾತಾಡಿದ ರಾಧಿಕಾ ಕುಮಾರಸ್ವಾಮಿ, ದರ್ಶನ್ ಜೊತೆ ನಟಿಸುವ ಅವಕಾಶ ಮತ್ತೆ ಸಿಕ್ಕರೆ ಖಂಡಿತಾ ನಟಿಸ್ತೀನಿ.‌ಹ್ಯಾಟ್ರಿಕ್ ಹಿಟ್ ಸಿನಿಮಾ ಕೊಡೋಕೆ ರೆಡಿ ಎಂದಿದ್ದಾರೆ.
ರಾಧಿಕಾ ದರ್ಶನ್ ಅವರ ಜೊತೆ ನಟಿಸುವ ಇಂಗಿತ ಹೊಂದಿದ್ದಾರೆ. ಅದಕ್ಕೆ ದರ್ಶನ್ ಓಕೆ ಅಂತಾರಾ ರಾಧಿಕಾರ ಮನದ ಆಸೆಯನ್ನು ಈಡೇರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Share post:

Subscribe

spot_imgspot_img

Popular

More like this
Related

‘ನನ್ನನ್ನು ಫಿನಿಶ್ ಮಾಡಲು ಯತ್ನ’: ಗಾಲಿ ಜನಾರ್ದನ ರೆಡ್ಡಿ ಸ್ಫೋಟಕ ಆರೋಪ

‘ನನ್ನನ್ನು ಫಿನಿಶ್ ಮಾಡಲು ಯತ್ನ’: ಗಾಲಿ ಜನಾರ್ದನ ರೆಡ್ಡಿ ಸ್ಫೋಟಕ ಆರೋಪ ಬಳ್ಳಾರಿ:...

ಫೆ.23ರಂದು ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಗದ್ದುಗೆ ಉದ್ಘಾಟನೆ, ಪಟ್ಟಾಭಿಷೇಕದಲ್ಲಿ ಭಾಗಿ

ಫೆ.23ರಂದು ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಗದ್ದುಗೆ ಉದ್ಘಾಟನೆ, ಪಟ್ಟಾಭಿಷೇಕದಲ್ಲಿ ಭಾಗಿ ಮಂಡ್ಯ:...

ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ಇಲ್ಲಿದೆ ಉತ್ತರ

ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ಇಲ್ಲಿದೆ ಉತ್ತರ ಚಳಿಗಾಲದಲ್ಲಿ ಅನೇಕರು...

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ...