ಕ್ಯಾಪ್ಟನ್ ಕೊಹ್ಲಿ ತಾನಿರುವುದೇ ಕ್ರಿಕೆಟ್ ಜಗತ್ತನ್ನು ಆಳುವುದಕ್ಕೆ ಎಂದು ಮತ್ತೊಮ್ಮೆ ಸಾರಿದ್ದಾರೆ. ಕೊಹ್ಲಿಯ ರನ್ ಗಳಿಕೆ ದಾಹಕ್ಕೆ ಕ್ರಿಕೆಟ್ ದೇವರ ಮತ್ತೊಂದು ರೆಕಾರ್ಡ್ ಚಿಂದಿಯಾಗಿದೆ.
ಮೊನ್ನೆ ಮೊನ್ನೆಯಷ್ಟೇ ಕ್ಯಾಪ್ಟನ್ ಕೊಹ್ಲಿ ಅತಿವೇಗವಾಗಿ 11 ಸಾವಿರ ರನ್ ಗಡಿ ದಾಟಿದ ಸಾಧನೆಯನ್ನು ಮಾಡಿದ್ದರು. ಅಲ್ಲೂ ಸಚಿನ್ ರೆಕಾರ್ಡ್ ಪುಡಿಗಟ್ಟಿದ್ದರು. ಇಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮ್ಯಾಚ್ನಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿ 20 ಸಾವಿರ ರನ್ಗಳ ಮೈಲುಗಲ್ಲು ನೆಟ್ಟಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಮೂರೂ ಮಾದರಿಯ ಕ್ರಿಕೆಟ್ನಿಂದ ಒಟ್ಟಾರೆಯಾಗಿ 417 ಇನ್ನಿಂಗ್ಸ್ಗಳಲ್ಲಿ ಕೊಹ್ಲಿ 20 ಸಾವಿರ ರನ್ ಸಿಡಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮಾತ್ರವಲ್ಲದೆ ಬ್ರಿಯಾನ್ ಲಾರ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಲಾರಾ 453 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ ಈಗ ಮೊದಲ ಸ್ಥಾನ ಅಲಂಕರಿಸಿದ್ದು, ಈ ಇಬ್ಬರು ಮಾಜಿ ಕ್ರಿಕೆಟಿಗರು ಜಂಟಿ 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದು, ಅವರು 468 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಕೊಹ್ಲಿ 77 ಟೆಸ್ಟ್ಗಳಿಂದ 6,613ರನ್ ಗಳಿಸಿದ್ದಾರೆ. ಇದರಲ್ಲಿ 25 ಶಕತ, 20 ಅರ್ಧಶತಕಗಳಿವೆ. 231 ಏಕದಿನ ಕ್ರಿಕೆಟ್ನಿಂದ 42 ಶತಕ, 52 ಅರ್ಧತಕದೊಂದಿಗೆ 11,087 ರನ್ ಮತ್ತು 67 ಟಿ20 ಪಂದ್ಯಗಳಿಂದ 2263 ರನ್ ಗಳಿಸಿದ್ದಾರೆ. ಅದರಲ್ಲಿ 20 ಅರ್ಧಶತಕಗಳು ಸೇರಿವೆ.
ಕೊಹ್ಲಿ ಅಬ್ಬರಕ್ಕೆ ಕ್ರಿಕೆಟ್ ದೇವರ ಮತ್ತೊಂದು ರೆಕಾರ್ಡ್ ಉಡೀಸ್..!
Date: