ಹೌದು, ಇಂದು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದರೆ ಸೆಮಿಫೈನಲ್ ತಲುಪುವ ಪಾಕ್ ದಾರಿ ಸ್ವಲ್ಪ ಸರಳವಾಗಲಿದೆ. ಜೊತೆಗೆ ಶ್ರೀಲಂಕಾವನ್ನು ಮಣಿಸಲಿ ಎಂದೂ ಪ್ರಾರ್ಥಿಸುತ್ತಿದ್ದಾರೆ.
ಪಾಕಿಸ್ತಾನ ಸೆಮಿಫೈನಲ್ಸ್ ನಿಂದ ಹೊರಗಟ್ಟಲು ಉದ್ದೇಶಪೂರ್ವಕವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಸೋಲಬಹುದು. ಟೀಂ ಇಂಡಿಯಾ ಯಾರಿಗೂ ಅರ್ಥವಾಗದ ರೀತಿ ಆಡುತ್ತಿದೆ. ಅಫ್ಘಾನಿಸ್ತಾನದ ವಿರುದ್ಧವೂ ಉದ್ದೇಶಪೂರ್ವಕವಾಗಿ ಕಳಪೆಯಾಗಿ ಆಡಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಬಸಿಲ್ ಅಲಿ ಹೇಳಿಕೆ ನೀಡಿದ್ದಾರೆ ಬಸಿಲ್ ಅಲಿ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.