ವಿಶ್ವಕಪ್ ಟ್ರೋಫಿಯೊಂದಿಗೇ ಭಾರತಕ್ಕೆ ವಾಪಸ್ ಆಗ್ತೀವಿ ಅಂತ ಭರವಸೆ ಮೂಡಿಸಿ ಆಂಗ್ಲರ ನಾಡಿನಲ್ಲಿ ಮಿಂಚುತ್ತಿರುವ ಭಾರತಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಶಿಖರ್ ಧವನ್ ಗಾಯಗೊಂಡು ಭಾರತಕ್ಕೆ ವಾಪಸ್ ಆಗಿದ್ದಾರೆ. ಈಗ ಆಲ್ ರೌಂಡರ್ ವಿಜಯ್ ಶಂಕರ್ ಕೂಡ ಗಾಯಗೊಂಡು ವಿಶ್ವಕಪ್ ನಿಂದ ಔಟ್ ಆಗಿದ್ದಾರೆ.
ವಿಜಯ್ ಶಂಕರ್ ಬದಲಿಗೆ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಶಿಷ್ಯ, ಕನ್ನಡಿಗ ಮಯಾಂಕ್ ಅಗರ್ ವಾಲ್ ತಂಡ ಸೇರಿದ್ದಾರೆ.
ಮಯಾಂಕ್ ಅಗರ್ ವಾಲ್ ಶಂಕರ್ ಬದಲಿಗೆ ವಿರಾಟ್ ಸೇನೆಯನ್ನು ಸೇರಿದ್ದಾರೆ. ಆಡುವ 11 ರ ಬಳಗದಲ್ಲಿಯೂ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ.
ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ಹೊರ ನಡೆದ ಮೇಲೆ ಕನ್ನಡಿಗ ಕೆ.ಎಲ್ ರಾಹುಲ್ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು. 4 ನೇ ಕ್ರಮಾಂಕಕ್ಕೆ ವಿಜಯ್ ಶಂಕರ್ ಸ್ಥಾನ ಪಡೆದಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರ ಬದಲಿಗೆ ರಿಷಭ್ ಪಂತ್ ಚಾನ್ಸ್ ಪಡೆದಿದ್ದರು. ಈಗ ಮಯಾಂಕ್ ಎಂಟ್ರಿಯಿಂದ ರಿಷಭ್ ಸ್ಥಾನ ವಂಚಿತರಾದರೂ ಆಗಬಹುದು.
ಕನ್ನಡಿಗರಾದ ಮಯಾಂಕ್ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿರುವವರು. ಅವರೀಗ ವಿಶ್ವಕಪ್ ನಲ್ಲಿ ಭಾರತದ ಪರ ಆಡುತ್ತಿರವುದು ಹೆಮ್ಮೆಯ ವಿಚಾರ.
ಭಾರತ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ್, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದಿದೆ. ಇಂಗ್ಲೆಂಡ್ ವಿರುದ್ಧ ಸೋಲುಂಡಿದೆ
ಟೀಮ್ ಇಂಡಿಯಾಕ್ಕೆ ದ್ರಾವಿಡ್ ಶಿಷ್ಯ..! ವಿರಾಟ್ ಪಡೆ ಸೇರಿಕೊಂಡ ಮತ್ತೊಬ್ಬ ಕನ್ನಡಿಗ..!
Date: