ಆಯಿಲ್ ಸ್ಕಿನ್ ನಿವಾರಣೆಯಾಗಲು ಮನೆಯಲ್ಲೇ ಸಿಗೋ ಕೆಲ ವಸ್ತುಗಳಿಂದ ತಯಾರಿಸಬಹುದಾದ ಸಿಂಪಲ್ ಫೇಸ್ ಪ್ಯಾಕ್ ಗಳನ್ನು ಬಳಸಿ ಸುಂದರವಾಗಿ ಕಾಣಬಹುದು.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಕಪ್ ಗೆ 1 ಚಮಚ ಕಡಲೆಹಿಟ್ಟು, 1 ಚಮಚ ಕಿತ್ತಲೆ ಸಿಪ್ಪೆಯ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಒಮ್ಮೆ ಮುಖವನ್ನ ತೊಳೆದು, ಶುಭ್ರವಾದ ಬಟ್ಟೆಯಿಂದ ನೀರಿನಂಶ ಇಲ್ಲದಂತೆ ಒರೆಸಿ. ನಂತರ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಫೇಸ್ ಪ್ಯಾಕ್ ಹಚ್ಚಿ 20 ನಿಮಿಷ ರಿಲ್ಯಾಕ್ಸ್ ಮಾಡಿ. ಫೇಸ್ ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದಲ್ಲಿ ವ್ಯತ್ಯಾಸ ಕಾಣುತ್ತದೆ.
2 ಚಮಚ ಸೌತೇಕಾಯಿ ರಸಕ್ಕೆ 1 ಚಮಚ ನಿಂಬೆರಸ ಬೆರೆಸಿ ಇದನ್ನ ಹತ್ತಿಯಲ್ಲಿ ತೆಗೆದುಕೊಂದು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಬಳಿಕ ಮುಖ ತೊಳೆಯಿರಿ.