2019ರ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಚೋಕರ್ಸ್ ಹಣೆಪಟ್ಟಿ ಕಟ್ಟಿ ಕೊಂಡಿರುವ ವಿಶ್ವ ಕ್ರಿಕೆಟ್ ನ ಬಲಾಢ್ಯ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರೀಕಾ, ವಿಶ್ವ ಕ್ರಿಕೆಟ್ ನ ಧೈತ್ಯ ಎಂದೇ ಗುರುತಿಸಿಕೊಂಡಿರುವ ವೆಸ್ಟ್ ಇಂಡೀಸ್..ವಿಶ್ವಕಪ್ ಫೈನಲ್ ತಲುಪಬಲ್ಲ ತಂಡದಲ್ಲೊಂದಾಗಿದ್ದ ಶ್ರೀಲಂಕಾ, ಪ್ರಬಲ ತಂಡಗಳಿಗೆ ಶಾಕ್ ನೀಡಿ ಸೆಮೀಸ್ ಗೆ ಲಗ್ಗೆ ಇಡುವ ನಿರೀಕ್ಷೆ ಹುಟ್ಟು ಹಾಕಿದ್ದ ಬಾಂಗ್ಲಾ. ನಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ..ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡಗಳು ಟೂರ್ನಿಯಿಂದ ಹೊರ ನಡೆದಿವೆ.
3 ನೇ ವಿಶ್ವಕಪ್ ತರಲು ರೆಡಿಯಾಗಿರುವ ಭಾರತ , ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ , ನ್ಯೂಜಿಲೆಂಡ್ , ಅತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಗೆ ಲಗ್ಗೆ ಇಟ್ಟಿವೆ.
ನಿನ್ನೆ ಭಾರತ ಮತ್ತು ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೊನೆಯ ಲೀಗ್ ಪಂದ್ಯಗಳು ನಡೆದವು. ಈ ಪಂದ್ಯಗಳ ಫಲಿತಾಂಶ ಸೆಮಿಫೈನಲ್ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಿತು.
ಅಂಕಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದ ಭಾರತ ಲಂಕಾ ವಿರುದ್ಧ ಜಯಿಸಿ ಮೊದಲ ಸ್ಥಾನಕ್ಕೇರಿತು. 2 ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿದ್ದರೆ ಮತ್ತೆ ಅದೇ ಮೊದಲ ಸ್ಥಾನದಲ್ಲಿ ಉಳೀತಿತ್ತು. ಸೋತು ಸೋತು ಸುಣ್ಣಾಗಿದ್ದ ‘ಸೋತಾ’ ಫ್ರಿಕಾ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಟೂರ್ನಿಯಿಂದ ಹೊರ ನಡೆಯಿತು.
ಹೀಗಾಗಿ ಸೆಮಿಫೈನಲ್ ಮುಖಾಮುಖಿಯೂ ಉಲ್ಟಾಪಲ್ಟಾ ಆಯಿತು.
ಭಾರತ ಮತ್ತು ಇಂಗ್ಲೆಂಡ್ , ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ನಲ್ಲಿ ಕಾದಾಡಲಿವೆ ಎನ್ನಲಾಗಿತ್ತು. ಈಗ ಭಾರತ ನಂಬರ್ 1 ಸ್ಥಾನಕ್ಕೆ ಬಂದಿದ್ದರಿಂದ ಭಾರತ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ- ಇಂಗ್ಲೆಂಡ್ ಮುಖಾಮುಖಿ ಆಗಲಿವೆ.
ಭಾರತ ಲೀಗ್ ಹಂತದಲ್ಲಿ ಸೋತಿದ್ದು ಕೇವಲ ಇಂಗ್ಲೆಂಡ್ ವಿರುದ್ಧ ಮಾತ್ರವೇ ಆಗಿತ್ತು. ಸೆಮೀಸ್ ನಲ್ಲಿಯೂ ಇಂಗ್ಲೆಂಡ್ ಎದುರಾಳಿ ಆಗಿದ್ದರೆ ಒತ್ತಡ ಕೂಡ ಹೆಚ್ಚಿರುತ್ತಿತ್ತು. ತವರಲ್ಲಿ ಆಂಗ್ಲರ ವಿರುದ್ಧ ಸೆಣಸಬೇಕಿದೆ ..ಆದರೆ , ನ್ಯೂಜಿಲೆಂಡ್ ಆರಂಭದಲ್ಲಿ ಪ್ರಬಲವಾಗಿದ್ದಾರು ನಂತರ ಸೋಲುಗಳ ಸುಳಿಯಲ್ಲಿ ಸಿಲುಕಿದೆ.ಭಾರತಕ್ಕೆ ನ್ಯೂಜಿಲೆಂಡ್ ಸುಲಭ ತುತ್ತಾಗುವ ಸಾಧ್ಯತೆ ಇದೆ. ಲೀಗ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ರದ್ದಾಗಿತ್ತು.
ಒಟ್ಟಿನಲ್ಲಿ ಭಾರತ ಫೈನಲ್ ಪ್ರವೇಶಿಸುವುದು ಪಕ್ಕಾ ಎಂಬ ಲೆಕ್ಕಾಚಾರದಲ್ಲಿದ್ದಾರೆ ಕ್ರಿಕೆಟ್ ಪಂಡಿತರು. ಭಾರತಕ್ಕೆ ಫೈನಲ್ ನಲ್ಲಿ ಆಸೀಸ್ ಎದುರಾಳಿಯೋ , ಇಂಗ್ಲೆಂಡ್ ಎದುರಾಳಿ ಆಗಲಿದೆಯೋ ಕಾದು ನೋಡಬೇಕು. ಯಾರೇ ಬಂದರು ವಿರಾಟ್ ಪಡೆಯ ಎದುರು ಮಂಡಿಯೂರುವುದು ಪಕ್ಕಾ..
ಆಗಿದ್ದೆಲ್ಲಾ ಭಾರತದ ಪರವೇ ಇದೆ..! ಕೊಹ್ಲಿ ಪಡೆಗೆ ಸೆಮೀಸ್ ಎದುರಾಳಿ ಯಾರು?
Date: