ವಿಶ್ವಕಪ್ 2019ರ ಪ್ಲೇಯಿಂಗ್ 11 ನಲ್ಲಿ ಟೀಮ್ ಇಂಡಿಯಾದ ನಾಯಕ, ರನ್ ಮಷಿನ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ..!
ಅರೆ ಏನಿದು ಭಾರತ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ನ್ಯೂಜಿಲೆಂಡ್ ವಿರುದ್ಧ ಸೆಮೀಸ್ನಲ್ಲಿ ಸೆಣೆಸಲು ರೆಡಿಯಾಗ್ತಾ ಇದೆ. ಕಿವೀಸ್ ಕಿವಿ ಹಿಂಡಿ ಫೈನಲ್ ಪ್ರವೇಶಿಸಲು ಉತ್ಸುಕವಾಗಿದೆ. ಆದರೆ, ಇದೇನಿದು ಅಂತಿಮ ಎರಡು ಪ್ರಮುಖ ಮ್ಯಾಚ್ ಗಳಲ್ಲೇ ಧೋನಿ, ಕೊಹ್ಲಿ ಆಡ್ದೇ ಇದ್ರೆ ಹೇಗೇ ಅಂತ ಕೇಳ್ತಿದ್ದೀರಾ.?
ಹಾಗೆ ಯೋಚಿಸಬೇಡಿ ನಾವು ಮೊದಲೇ ಹೇಳಿದ್ದೀವಿ ಟೀಮ್ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಧೋನಿ, ಕೊಹ್ಲಿ ಆಡ್ತಿಲ್ಲ ಅಂತ ಹೇಳ್ತಿಲ್ಲ..! ಬದಲಾಗಿ ನಾವು ಹೇಳ್ತಿರೋದು ವಿಶ್ವಕಪ್ ಪ್ಲೇಯಿಂಗ್ 11 ನಲ್ಲಿ ಅಂತ.!
ವಿಶ್ವಕಪ್ ಟೂರ್ನಿ ಮುಕ್ತಾಯದ ಹಂತ ತಲುಪಿದೆ. ಭಾರತ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿವೆ, ಅಂತಿಮ ಹಂತ ತಲುಪದ ತಂಡದ ಕೆಲವು ಸದಸ್ಯರೂ ಕೂಡ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಹೀಗಾಗಿ ಎಲ್ಲಾ 10 ತಂಡಗಳ ಆಟಗಾರರನ್ನು ಆಯ್ಕೆ ಮಾಡಿಕೊಂಡು ಪ್ಲೇಯಿಂಗ್ 11 ತಂಡವನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಭಾರತದ ನಾಲ್ವರು ಇರುವುದು ಖುಷಿ ವಿಚಾರ.
2019ರ ವಿಶ್ವಕಪ್ ಪ್ಲೇಯಿಂಗ್ 11 ಹೀಗಿದೆ. ಕೇನ್ ವಿಲಿಯಮ್ಸನ್ (ನಾಯಕ), ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ಶಕೀಬ್-ಅಲ್- ಹಸನ್, ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ, ಌಲೆಕ್ಸ್ ಕೇರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಜೋಫ್ರ ಆರ್ಚರ್, ಯುಜುವಿಂದ್ರ ಚಹಲ್, ಜಸ್ಪ್ರೀತ್ ಬೂಮ್ರಾ,