ಪ್ರಸಕ್ತ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ದಾಖಲೆಗಳನ್ನು ರೋಹಿತ್ ಪುಡಿಗಟ್ಟಿದ್ದಾರೆ. ಈಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸುವ ನಿಟ್ಟಿನಲ್ಲಿ ಒಂದೊಳ್ಳೆ ಅವಕಾಶ ಹಿಟ್ ಮ್ಯಾನ್ಗಿದೆ.
2003ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ 673ರನ್ ಮಾಡಿದ್ದರು. ಪ್ರಸ್ತಕ ಸಾಲಿನಲ್ಲಿ ರೋಹಿತ್ ಶರ್ಮಾ ಈಗಾಗಲೇ 647 ರನ್ ಸಿಡಿಸಿದ್ದಾರೆ. ಇಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 26ರನ್ ಮಾಡಿದರೆ ಸಾಕು ಸಚಿನ್ ದಾಖೆ ಪುಡಿ.ಈ ದಾಖಲೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ಗೂ ಸಾಧ್ಯವಿದೆ. ವಾರ್ನರ್ ಈಗ ರೋಹಿತ್ ಬೆನ್ನಲ್ಲೇ ಇದ್ದಾರೆ 638ರನ್ ಮಾಡಿದ್ದಾರೆ.
ರೋಹಿತ್ ಈ ದಾಖಲೆ ಮಾತ್ರವಲ್ಲದೆ ಇನ್ನೊಂದು ಸಚಿನ್ ದಾಖಲೆಯನ್ನು ಮುರಿಯುವ ಅವಕಾಶ ಕೂಡ ಹಿಟ್ ಮ್ಯಾನ್ಗಿದೆ. ವರ್ಲ್ಡ್ಕಪ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ 6 ಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಈಗ ಸಚಿನ್ ರಷ್ಟೇ ಶತಕಗಳಿಸಿದ್ದಾರೆ. 2015ರ ವಿಶ್ವಕಪ್ನಲ್ಲಿ1 ಸೆಂಚುರಿ ಬಾರಿಸಿದ್ದ ಹಿಟ್ ಮ್ಯಾನ್ ಈ ಬಾರಿ ಸತತ 3 ಸೆಂಚುರಿ ಸೇರಿದಂತೆ 5 ಸೆಂಚುರಿ ಬಾರಿಸಿದ್ದಾರೆ. ಇದರೊಂದಿಗೆ ಒಟ್ಟು 6ಮ ಶತಕಗಳನ್ನು ರೋಹಿತ್ ದಾಖಲಿಸಿದ್ದಾರೆ. ಇಂದಿನ ಸೆಮಿಫೈನಲ್ನಲ್ಲಿ ಸೆಂಚುರಿ ದಾಖಲಿಸಿದರೆ ಸಚಿನ್ ರೆಕಾರ್ಡ್ ಬ್ರೇಕ್ ಆಗಲಿದೆ.