ರಿಯಾಲಿಟಿ ಶೋಗಳ ಪೈಕಿ ಜನಪ್ರಿಯವಾಗಿರುವ ಶೋಗಳಲ್ಲೊಂದು ಬಿಗ್ಬಾಸ್. ಈ ಶೋ ನ ಬಗ್ಗೆ ನಟಿಯೊಬ್ಬರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಜುಲೈ 21ರಿಂದ ತೆಲುಗು ಬಿಗ್ ಬಾಸ್ ಶುರುವಾಗುತ್ತಿದೆ. ನಟ ನಾನಿ ಬದಲಾಗಿ ಈ ಬಾರಿ ಅಕ್ಕಿನೇನಿ ನಾಗಾರ್ಜುನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ನಡುವೆ ಫಿದಾ ಸಿನಿಮಾ ಖ್ಯಾತಿಯ ನಟಿ ಗಾಯತ್ರಿ ಗುಪ್ತಾ ಅಚ್ಚರಿ ಹಾಗೂ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಗಾಯತ್ರಿ ಗುಪ್ತಾ 3ನೇ ಆವೃತ್ತಿಯ ಬಿಗ್ಬಾಸ್ನಲ್ಲಿ ಪಾಲ್ಗೊಳ್ಳಲು ನನಗೆ ಆಫರ್ ಬಂದಿತ್ತು. 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿರಲು ಸೆಕ್ಸ್ ಮಾಡಬೇಕು ಎಂದು ಮಂಚಕ್ಕೆ ಆಹ್ವಾನಿಸಿದ್ದರು ಎಂಬ ಹೇಳಿಕೆ ನೀಡಿದ್ದಾರೆ.
ಅಂತಿಮ ಆಡಿಷನ್ಗೆ ಆಯೋಜಕರು ಕರೆದಿದ್ದರು. ಸೆಕ್ಸ್ ಮಾಡದೇ ಮನೆಯಲ್ಲಿ 100 ದಿನಗಳ ಕಾಲ ಇರಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಆಯ್ಕೆ ಆಗ್ಬೇಕಂದ್ರೆ ಮಂಚಕ್ಕೆ ಬರಬೇಕು ಎಂದು ಕಂಡಿಷನ್ ಹಾಕಿದ್ದರು ಎಂದು ಗಾಯತ್ರಿ ಗುಪ್ತಾ ಹೇಳಿದ್ದಾರೆ.
ಬಿಗ್ ಬಾಸ್ ಆರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದ್ದು, ನಟಿಯ ಹೇಳಿಕೆ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸಿನಿಮಾ ಕ್ಷೇತ್ರದಲ್ಲಿ ಈ ಆರೋಪ ಬಲವಾಗಿ ಕೇಳಿಬಂದಿತ್ತು. ನಟಿಯರು ಅವಕಾಶಕ್ಕಾಗಿ ಪಲ್ಲಂಗ ಏರಬೇಕು ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಕಿರುತೆರೆ ಮೇಲೂ ಈ ಆರೋಪ ಕೇಳಿ ಬಂದಿರುವುದು ನಿಜಕ್ಕೂ ಬೇಸರದ ಸಂಗತಿ.