ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ನ ಬಹು ನಿರೀಕ್ಷಿತ ಕನ್ನಡ ಸಿನಿಮಾ ‘ಯುವ ರತ್ನ’. ಟೈಟಲ್ ಲಾಂಚ್ ಆದಲ್ಲಿಂದಲೂ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿರುವ ಯುವರತ್ನ ಟೀಮ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇದೆ.
5ನೇ ಹಂತದ ಶೂಟಿಂಗ್ನಲ್ಲಿರುವ ಚಿತ್ರತಂಡವನ್ನು ದಿನಕ್ಕೊಬ್ಬರಂತೆ ಸ್ಟಾರ್ ಗಳು ಸೇರಿಕೊಳ್ಳುತ್ತಿದ್ದಾರೆ. ತೆಲುಗಿನ ಸ್ಟಾರ್ ಮ್ಯೂಸಿಕ್ ಕಂಪೋಸರ್ ಎಸ್.ಎಸ್ ತಮನ್ ಮೊನ್ನೆ ಮೊನ್ನೆಯಷ್ಟೇ ತಂಡ ಕೂಡಿ ಕೊಂಡಿದ್ದರು. ಈಗ ಸ್ಯಾಂಡಲ್ವುಡ್ನ ಮತ್ತೊಬ್ಬ ಸ್ಟಾರ್ ತಂಡವನ್ನು ಕೂಡಿ ಕೊಂಡಿದ್ದಾರೆ.
ಹೌದು, ಸ್ಯಾಂಡಲ್ವುಡ್ನ ದೂದ್ ಪೇಡ ಖ್ಯಾತಿಯ ನಟ ದಿಗಂತ್ ಅವರು ಯುವರತ್ನ ಪುನೀತ್ ರಾಜ್ಕುಮಾರ್ ಅವರ ತಂಡವನ್ನು ಸೇರಿಕೊಂಡಿದ್ದಾರೆ. ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರು ಕಾಲೇಜು ವಿದ್ಯಾರ್ಥಿ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ದಿಗಂತ್ ಪಾತ್ರ ಯಾವ್ದು ಅಂತ ಇನ್ನೂ ರಿವೀಲ್ ಆಗಿಲ್ಲ.
ಇನ್ನು ಚಿತ್ರತಂಡದಲ್ಲಿ ಸಾಯೇಷಾ ಸೈಗಲ್, ಟಗರು ಡಾಲಿ ಧನಂಜಯ್, ಕಾಕ್ರೋಚ್ ಸುಧೀಂದ್ರ ಮತ್ತಿತರರು ನಟಿಸುತ್ತಿದ್ದಾರೆ.
ಪವರ್ ಸ್ಟಾರ್ಗೆ ದೂದ್ ಪೇಡ ಸಾಥ್..!
Date: