ಮಾಜಿ ಸಚಿವ ರೋಷನ್ ಬೇಗ್ ವಿಚಾರಣೆ ಅಂತ್ಯಗೊಂಡಿದೆ. ಸತತ 13 ತಾಸುಗಳ ವಿಚಾರಣೆ ನಂತ್ರ ಕಳುಹಿಸಿಕೊಡಲಾಗಿದೆ. ನಿನ್ನೆ 11 ಗಂಟೆಗೆ ಅವ್ರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಎಸ್‌ಐಟಿ ಜುಲೈ 19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ವಿಚಾರಣೆ ನಂತ್ರ ಮಾಧ್ಯಮಗಳ ಜೊತೆ ಮಾತನಾಡಿದ ರೋಷನ್ ಬೇಗ್, ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಎಸ್ ಐಟಿಗೆ ಭರವಸೆ ನೀಡಿದ್ದೇನೆ. ಇದ್ರಲ್ಲಿ ರಾಜಕೀಯ ಪಿತೂರಿಯಿದೆ. ಜುಲೈ 19ರಂದು ನಾನು ಮತ್ತೆ ವಿಚಾರಣೆಗೆ ಬರ್ತೇನೆಂದು ಹೇಳಿದ್ದಾರೆ.
ಐಎಂಎ ಸಮೂಹ ಕಂಪನಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ನಿನ್ನೆ ರಾತ್ರಿ ರೋಷನ್ ಬೇಗ್ ಅವ್ರನ್ನು ವಶಕ್ಕೆ ಪಡೆದಿದ್ದರು.
ಐಎಂಎ ಸಮೂಹ ಕಂಪನಿ ಮಾಲೀಕ ಮನ್ಸೂರ್ ಖಾನ್ ರಿಂದ ಹಣ ಪಡೆದಿದ್ದಾರೆಂಬ ಕಾರಣಕ್ಕೆ ಜುಲೈ 19ರಂದು ಎಸ್‌ಐಟಿ ಮುಂದೆ ಹಾಜರಾಗುವಂತೆ ನೊಟೀಸ್ ನೀಡಿತ್ತು.ಇದು ತಿಳಿದ ರೋಷನ್ ಬೇಗ್ ಮುಂಬೈಗೆ ಹೊರಟಿದ್ದಾರೆಂಬ ಸುದ್ದಿ ಬಹಿರಂಗವಾಗಿತ್ತು. ತಕ್ಷಣ ಕಾರ್ಯಾಚರಣೆಗಿಳಿದ ಎಸ್‌ಐಟಿ ಅಧಿಕಾರಿಗಳು ರೋಷನ್ ಬೇಗ್ ಅವ್ರನ್ನು ವಶಕ್ಕೆ ಪಡೆದಿದ್ದರು.