ಲೈಂಗಿಕ ಕ್ರಿಯೆ ಗಂಡು-ಹೆಣ್ಣು ಇಷ್ಟ ಬಂದಾಗ ಯಾವಾಗ ಬೇಕಾದರೂ ಮಾಡಬಹುದು ಆದರೆ ಯಾವ ಸಮಯದಲ್ಲಿ ಗಂಡು-ಹೆಣ್ಣು ಕೂಡಿದರೆ ಹೆಚ್ಚು ಸುಖ ಸಿಗುತ್ತೆ ಗೊತ್ತಾ?
ಅಧ್ಯಯನವೊಂದರ ಪ್ರಕಾರ ಲೈಂಗಿಕ ಕ್ರಿಯೆಗೆ ಬೆಳಿಗ್ಗೆ 7.30 ಸೂಕ್ತವಾದ ಸಮಯವಂತೆ. ಬೆಳಿಗ್ಗೆ ಎದ್ದ 45 ನಿಮಿಷಗಳ ಬಳಿಕ ಸೇರಿದರೆ, ಇಬ್ಬರಲ್ಲೂ ಉತ್ಸಾಹ ಹೆಚ್ಚಿರುತ್ತದೆ.
ರಾತ್ರಿ ವಿಶ್ರಾಂತಿ ಪಡೆದು ಬೆಳಿಗ್ಗೆ ಎದ್ದ 45 ನಿಮಿಷದ ನಂತರ ಸೇರಿದರೆ, ಉತ್ಸಾಹ ಆಸಕ್ತಿ ಹೆಚ್ಚಾಗುತ್ತದೆ. ರಕ್ತದೊತ್ತಡ, ಮಾನಸಿಕ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. 3 ಗಂಟೆ ಬಳಿಕ ಏಕಾಗ್ರತೆ ಹೆಚ್ಚುತ್ತದೆ. ನಂತರ ಕೆಲಸಕ್ಕೆ ಹೋಗಲು ಮತ್ತು ದಿನವಿಡೀ ಉತ್ಸಾಹದಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ಆರೋಗ್ಯ ಮತ್ತು ಯೋಗ ಕ್ಷೇಮದ ಸಂಸ್ಥೆಯಾದ ಪೋರ್ಜಾ ಸಪ್ಲಿಮೆಂಟ್ಸ್ 1000 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿದೆ. ಪೋರ್ಜಾ ಸಪ್ಲಿಮೆಂಟ್ಸ್ ಅಧ್ಯಯನದಲ್ಲಿ ದೈನಂದಿನ ಜೀವನದ ಪ್ರತಿ ಚಟುವಟಿಕೆಯ ಸೂಕ್ತ ಸಮಯ ಯಾವುದು ಎಂಬುದು ತಿಳಿದು ಬಂದಿದೆ. ಅದರಂತೆ ಲೈಂಗಿಕ ಕ್ರಿಯೆಗೆ ಬೆಳಿಗ್ಗೆ 7.30 ಬೆಸ್ಟ್ ಟೈಮ್ ಆಗಿದೆ. ರಾತ್ರಿ 10.10 ರ ವೇಳೆಗೆ ಮಲಗಿದರೆ ಅನುಕೂಲ ಎನ್ನಲಾಗಿದೆ.