ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ವಿಶ್ವಾಸ ಮತಯಾಚನೆಗೂ ಮೊದಲು ಪ್ರಸಕ್ತ ಬೆಳವಣಿಗೆ ಬಗ್ಗೆ ಮಾತನಾಡಲಿದ್ದಾರೆ. ವಿಶ್ವಾಸ ಮತಯಾಚನೆ ವಿಳಂಬ ಮಾಡಿ ಸಮಯಾವಕಾಶ ಬಳಸಿಕೊಂಡು ಅತೃಪ್ತ ಶಾಸಕರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾದ ಬಿಜೆಪಿ ನಿಯೋಗದಿಂದ ನಾಳೆ ವಿಶ್ವಾಸ ಮತಯಾಚನೆ ವೇಳೆ ಕಾಲಹರಣ ಮಾಡದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಲಾಗಿದೆ.
ವಿಶ್ವಾಸಮತಯಾಚನೆ ಹೆಸರಲ್ಲಿ ಚರ್ಚೆಗೆ ಅವಕಾಶ ನೀಡಬಾರದು. ಚರ್ಚೆಗೆ ಅವಕಾಶ ನೀಡಿದರೆ ಕಾಲಹರಣ ಮಾಡುವ ಸಾಧ್ಯತೆ ಇದೆ. ನೇರವಾಗಿ ವಿಶ್ವಾಸ ಮತಯಾಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.ವಿರೋಧ ಪಕ್ಷದಿಂದ ಯಾರೂ ಭಾಷಣ ಮಾಡುವುದಿಲ್ಲ. ನೇರವಾಗಿ ವಿಶ್ವಾಸ ಮತಯಾಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಶಾಸಕರಾದ ಬಸವರಾಜ ಬೊಮ್ಮಾಯಿ, ಕೆ.ಜಿ. ಬೋಪಯ್ಯ, ಮಾಧುಸ್ವಾಮಿ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.