ಕುಷ್ಟಗಿ ತಾಲೂಕಿನ ನವಹಳ್ಳಿಯಲ್ಲಿ ಶಿಕ್ಷಣ ಪೂರೈಸಿದ ಮಂಜುನಾಥ್ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿ, ವೈದ್ಯಕೀಯ ಎಂ.ಡಿ. ಕೋರ್ಸ್ ಅನ್ನು ಚಂಡೀಗಢದಲ್ಲಿ ಪೂರೈಸಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪರೀಕ್ಷೆಯ ಎಂಡೊಕ್ರೈನೊಲಾಜಿ ವಿಷಯದಲ್ಲಿ ದೇಶಕ್ಕೆ ಫಸ್ಟ್ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮಂಜುನಾಥ್, ದಿನಕ್ಕೆ 16 ಗಂಟೆ ಅಭ್ಯಾಸ ಮಾಡುವುದಲ್ಲದೆ ಸ್ನೇಹಿತರ ಜೊತೆ ಚರ್ಚಿಸುತ್ತಿದೆ. ಎಂಡೊಕ್ರೈನೊಲಾಜಿ ಪರೀಕ್ಷೆಗೆ 1,600 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ತಿಳಿಸಿದ್ದಾರೆ.