ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನಂಬರ್ 1 ಪಟ್ಟವನ್ನು ಕಾಯ್ದುಕೊಂಡಿದ್ದಾರೆ. ಒಡಿಐನಲ್ಲೂ ಕೊಹ್ಲಿ ನಂಬರ್ 1 ಪಟ್ಟದಲ್ಲಿದ್ದು, ಟೆಸ್ಟ್ನಲ್ಲೂ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಟೆಸ್ಟ್ ಹಾಗೂ ಏಕದಿನ ಎರಡು ಮಾದರಿಯಲ್ಲೂ ಟೀಮ್ ಇಂಡಿಯಾದ ನಾಯಕನೇ ನಂಬರ್ 1!
ಇಂದು ನೂತನ ಟೆಸ್ಟ್ ರ್ಯಾಕಿಂಗ್ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. 922 ಅಂಕಗಳೊಂದಿಗೆ ಕೊಹ್ಲಿ ನಂಬರ್ 1 ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್ 913 ಅಂಕಗಳೊಂದಿಗೆ ನಂಬರ್ 2 ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ 881 ಅಂಕಗಳೊಂದಿಗೆ 3ನೇ ಆಸ್ಟ್ರೇಲಿಯಾದ ಸ್ಮಿತ್ 857 ಅಂಕಗಳೊಂದಿಗೆ 4ನೇ, ನ್ಯೂಜಿಲೆಂಡ್ನ ನಿಕೋಲ್ಸ್ 778 ಅಂಕಗಳೊಂದಿಗೆ ನ್ಯೂಜಿಲೆಂಡ್, ಇಂಗ್ಲೆಂಡ್ ನ ಜೆ,ಇ ರೂಟ್ 763 ಅಂಕಗಳೊಂದಿಗೆ 6ನೇ, ಆಸೀಸ್ನ ಡೇವಿಡ್ ವಾರ್ನರ್ 756 ಅಂಕಗಳೊಂದಿಗೆ 7ನೇ, 719 ಅಂಕಗಳೊಂದಿಗೆ ಸೌತ್ ಆಫ್ರಿಕಾದ ಆಟಗಾರರಾದ ಎ.ಕೆ ಮಾರ್ಕ್ರಮ್ 719 ಅಂಕಗಳೊಂದಿಗೆ 8ನೇ,ಡ ಡಿಕಾಕ್ 718 ಅಂಕಗಳೊಂದಿಗೆ 9ನೇ, ಡುಪ್ಲೆಸಿಸ್ 702 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಕ್ರಮವಾಗಿ 6 ಮತ್ತು 10ನೇ ಸ್ಥಾನದಲ್ಲಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ನಾಯಕ ಕೊಹ್ಲಿ 886 ಅಂಕಗಳೊಂದಿಗೆ ನಂಬರ್ 1 ಹಾಗೂ ಉಪನಾಯಕ ರೋಹಿತ್ ಶರ್ಮಾ881 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಮೊದಲ ಸ್ಥಾನದಲ್ಲಿದ್ದಾರೆ. ಟಿ20ಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮೊದಲ, ನ್ಯೂಜಿಲೆಂಡ್ನ ಮನ್ರೋ ಎರಡನೇ, ಭಾರತದ ರೋಹಿತ್ ಶರ್ಮಾನ 10ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅಪ್ಘಾನಿಸ್ತಾನ್ ರಶಿದ್ ಖಾನ್ ಮೊದಲ, ಪಾಕ್ ನ ಇಮಾದ್ ವಾಸಿಂ 2ನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ನಲ್ಲೂ ನಂಬರ್-1 ಪಟ್ಟ ಕಾಯ್ದುಕೊಂಡ ಕೊಹ್ಲಿ..!
Date: