ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ತಮ್ಮ ಎರಡನೇ ಅವಧಿಯಲ್ಲೂ ಪೂರ್ಣವಧಿ ಆಡಳಿತ ಮಾಡಲು ಸಾಧ್ಯವಾಗಿಲ್ಲ. ಅಧಿಕಾರ ಉಳಿಸಿಕೊಳ್ಳಲು ನಡೆಸಿದ ಪ್ಲಾನ್ ಯಾವ್ದೂ ವರ್ಕ್ಔಟ್ ಆಗದೇ ನಿನ್ನೆ ಮೈತ್ರಿ ಸರ್ಕಾ ಪತನವಾಗಿದೆ. ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆಯನ್ನು ನೀಡಿದ್ದಾರೆ.
ಸಿಎಂ ಅಧಿಕಾರದಿಂದ ಕೆಳಗಿಳಿಯುವ ಮೊದಲು ನಾಡಿನ ಜನತೆಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಇಂದು ಪ್ರೆಸ್ಮೀಟ್ ಮಾಡಿದ ಕುಮಾರಸ್ವಾಮಿಯವರು ಮಹತ್ವದ ಕಾಯ್ದೆಯನ್ನು ಘೋಷಿಸಿದ್ದಾರೆ. ಬಡವರ ಸಾಲಮನ್ನಾ ಮಾಡುವ ಋಣಮುಕ್ತ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಈ ಕಾಯ್ದೆಗೆ ಜುಲೈ 16ರಂದು ರಾಷ್ಟ್ರಪತಿಗಳು ಅಂಕಿತವನ್ನೂ ಹಾಕಿದ್ದಾರೆ,
ವಾರ್ಷಿಕ 1.20 ಲಕ್ಷ ರೂಗಳಿಗಿಂತ ಕಡಿಮೆ ಆದಾಯ, 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವರ ಖಾಸಗಿ ಸಾಲ ಮನ್ನಾವಾಗಲಿದೆ. ಕೈ ಸಾಲ, ಲೇವಾದೇವಿ ಸಾಲ, ಲೇವಾದೇವಿ ಸಾಲ ಮನ್ನವಾಗದಲಿದೆ. 90 ದಿನಗಳ ಒಳಗೆ ಸರಿಯಾದ ದಾಖಲೆಗಳನ್ನು ನೀಡಿದ್ರೆ ಸಾಲಮನ್ನಾವಾಗಲಿದೆ.
ಕುಮಾರಸ್ವಾಮಿಯವರು ತಮ್ಮ ಎರಡನೇ ಅವಧಿಯಲ್ಲಿ 14 ತಿಂಗಳ ಕಾಲ ಅಧಿಕಾರದಲ್ಲಿದ್ದರು. ಮೈತ್ರಿ ಸರ್ಕಾರದ ಬಗ್ಗೆ ಆಗಾಗ ಅವರು ಅಸಮಧಾನ ವ್ಯಕ್ತಪಡಿಸಿದ್ದೂ ಇದೆ. ಲೋಕಸಭಾ ಚುನಾವಣೆಯ ಸೋಲಿನ ನಂತರ ದೋಸ್ತಿ ಚೇತರಿಸಿಕೊಳ್ಳಲೇ ಇಲ್ಲ.ನಿನ್ನೆ ಪತನವಾಯಿತು.
ಅಧಿಕಾರದಿಂದ ಇಳಿಯುವ ಮುನ್ನ ಯಾರೂ ನಿರೀಕ್ಷೆ ಮಾಡದ ಕೊಡುಗೆ ಕೊಟ್ಟ ಕುಮಾರಸ್ವಾಮಿ..!
Date: