ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ 2007, 2011ರ ವರ್ಲ್ಡ್ಕಪ್ ಹೀರೋ, ಕ್ಯಾನ್ಸರ್ ಗೇ ಸೆಡ್ಡು ಹೊಡೆದು ದೇಶಕ್ಕಾಗಿ ಆಡಿದ ಮಹಾನ್ ಆಟಗಾರ ಯುವಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಯುವಿಯನ್ನು ಮೈದಾನದಲ್ಲಿ ನೋಡೋಕೆ ಆಗಲ್ಲ ಅಂತ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಯುವಿ ಮತ್ತೆ ಮೈದಾನಕ್ಕೆ ಇಳಿದಿದ್ದಾರೆ..!
ಯುವಿ ಟೀಮ್ ಇಂಡಿಯಾಕ್ಕೆ ವಾಪಸ್ಸಾದ್ರಾ, ನಿವೃತ್ತಿ ಹಿಂಪಡೆದು ಬಿಟ್ರಾ? ಬ್ಲೂ ಜೆರ್ಸಿಯಲ್ಲಿ ಯುವಿ ಮತ್ತೆ ಕಣಕ್ಕೆ ಇಳಿದ್ರಾ ಎಂದುಕೊಳ್ಳಬೇಡಿ. ಅದಕ್ಕೆ ಕ್ಲಾರಿಟಿ ಇಲ್ಲಿದೆ.
ಯುವರಾಜ್ ಸಿಂಗ್ ಈಗ ಕೆನಾಡಾದ ಗ್ಲೋಬಲ್ ಟಿ20ಯಲ್ಲಿ ಯುವಿ ಪಾಲ್ಗೊಂಡಿದ್ದಾರೆ. ವ್ಯಾಂಕೋವರ್ ನೈಟ್ಸ್ ಕ್ಲಬ್ ಪರ ಯುವಿ ಕಣಕ್ಕಿಳಿದಿದ್ದಾರೆ. ಮೊದಲ ಮ್ಯಾಚ್ನಲ್ಲಿ ಯುವರಾಜ್ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. 27 ಬಾಲ್ಗಳಲ್ಲಿ 14ರನ್ ಗಳಿಸಿದ್ದ ಅವರು ರಿಜ್ವಾನ್ ಚೀಮಾ ಬೌಲಿಂಗ್ನಲ್ಲಿ ಸ್ಟಂಪ್ ಔಟ್ ಆಗಿದ್ದಾರೆ. ಬೌಲರ್ ಅಪೀಲ್ ಮಾಡುವ ಮೊದಲೇ ಯುವಿ ಕ್ರೀಸ್ ಬಿಟ್ಟು ತೆರಳಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಯುವಿ ಕ್ರೀಡಾ ಸ್ಫೂರ್ತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಯುವರಾಜ್ ಸಿಂಗ್ ಭಾರತದ ಪರ 40 ಟೆಸ್ಟ್ ಮ್ಯಾಚ್ಗಳನ್ನು ಆಡಿದ್ದು 1,900ರನ್ ಮಾಡಿದ್ದಾರೆ. ಇದರಲ್ಲಿ 3 ಶತಕ, 11 ಅರ್ಧಶತಕಗಳಿವೆ. 9 ವಿಕೆಟ್ ಕೂಡ ಕಿತ್ತಿದ್ದಾರೆ. 304 ಒಡಿಐನಿಂದ 8,701ರನ್ ಬಾರಿಸಿದ್ದಾರೆ. ಇದರಲ್ಲಿ 111 ವಿಕೆಟ್ ಕಿತ್ತಿದ್ದಾರೆ. ಇನ್ನು 58 ಟಿ20ಯಿಂದ 1,177ರನ್ ಮಾಡಿದ್ದಾರೆ. 8 ಅರ್ಧಶತಕ ಬಾರಿಸಿದ್ದಾರೆ. ಇತ್ತೀಗಷ್ಟೇ ಎಲ್ಲಾ ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.