ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತವಿಟ್ಟು ರಾಜೀನಾಮೆ ನೀಡಿ ಮುಂಬೈನಲ್ಲಿ ಕುಳಿತಿರುವ ಎಲ್ಲಾ ಅತೃಪ್ತ ಶಾಸಕರಿಗೂ ಅನರ್ಹತೆ ಶಿಕ್ಷೆ ನೀಡಿ ಸ್ಪೀಕರ್ರ ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಇಂದು 14 ಅತೃಪ್ತರಿಗೆ ಅನರ್ಹತೆ ಶಿಕ್ಷೆ ನೀಡಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಒಟ್ಟು 17 ಮಂದಿ ಶಾಸಕರನ್ನು ಅನರ್ಹಗೊಳಿಸಿದಂತಾಗಿದೆ,
ಶಾಸಕರಾದ ಪ್ರತಾಪ್‌ಗೌಡ ಪಾಟೀಲ್, ಬಿ ಸಿ ಪಾಟೀಲ್, ಶಿವರಾಮ ಹೆಬ್ಬಾರ್, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜು, ಆನಂದ್ ಸಿಂಗ್ ರೋಷನ್ ಬೇಗ್, ಮುನಿರತ್ನ, ಸುಧಾಕರ್, ಎಂಟಿಬಿ ನಾಗರಾಜ್, ಎಚ್ ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ, ಶ್ರೀಮಂತ ಪಾಟೀಲ್‌ರನ್ನು ಅನರ್ಹಗೊಳಿಸಿದ್ದಾರೆ.
ಮೂರುದಿನಗಳ ಹಿಂದೆಯಷ್ಟೇ ಮೂರು ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಅಂದು ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ, ಆರ್. ಶಂಕರ್ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಇಂದು 14 ಮಂದಿಗೆ ಅದೇ ಶಾಕ್ ನೀಡಿದ್ದಾರೆ.
ನಾಳೆ ಬಿ,ಎಸ್ ಯಡಿಯೂರಪ್ಪ ವಿಶ್ವಾಸ ಮತ ಸಾಬೀತು ಪಡಿಸಲಿದ್ದಾರೆ. ಒಟ್ಟು 17 ಮಂದಿ ಶಾಸಕರ ಅನರ್ಹತೆಯಿಂದ ಸದನದ ಸಂಖ್ಯಾಬಲ 208ಕ್ಕೆ ಕುಸಿದಿದ್ದು ಮ್ಯಾಜಿಕ್ ನಂಬರ್ 105 ಆಗಿದೆ. ಬಿಜೆಪಿ ಆ ಬಲವನ್ನು ಹೊಂದಿದೆ.