ಆತ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಶಿಷ್ಯ. ಆತನ ನಾಯಕತ್ವದಲ್ಲಿ ಭಾರತ ಅಂಡರ್ 19 ವಿಶ್ವಕಪ್ ಗೆದ್ದಿತ್ತು. ಟೀಂ ಇಂಡಿಯಾದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದಲ್ಲದೆ ಮುಂದೊಂದು ದಿನ ತಂಡದ ಸಾರಥ್ಯವನ್ನೂ ವಹಿಸಿಕೊಳ್ಳುತ್ತಾನೆ ಎಂಬ ನಂಬಿಕೆ ಕ್ರಿಕೆಟ್ ಅಭಿಮಾನಿಗಳದ್ದು, ಪಂಡಿತರದ್ದು..! ಆ ಯುವ ಆಟಗಾರನಿಗೆ ಈಗಾಗಲೇ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಈ ಭರವಸೆಯ ಆಟಗಾರ ಈಗ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಹೌದು , ಭಾರತಕ್ಕೆ ಅಂಡರ್ 19 ವಿಶ್ವಕಪ್ ತಂದುಕೊಟ್ಟ ಯುವ ನಾಯಕ, ರಾಹುಲ್ ದ್ರಾವಿಡ್ ಅವರ ಶಿಷ್ಯೋತ್ತಮ ಎಂದ ಕೂಡಲೇ ನಿಮ್ಮೆಲ್ಲರ ತಲೆಯಲ್ಲೊಂದು ಹೆಸರು ಬಂದಿರುತ್ತೆ…ಅದೇ ಪೃಥ್ವಿ ಶಾ…ಅದೇ ಪೃಥ್ವಿ ಶಾ ಅಮಾನತುಗೊಂಡಿದ್ದಾರೆ.
ಹೌದು ಟೀಂ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಅಮಾನತುಗೊಂಡಿದ್ದಾರೆ.
ನಿಷೇಧಿತ ವಸ್ತುವನ್ನು ಸೇವಿಸಿ ಬಿಸಿಸಿಐ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ನವೆಂಬರ್ 15ರವರೆಗೆ ಅವರನ್ನು ಅಮಾನತುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಿದೆ.
ಕಳೆದ ಫೆಬ್ರವರಿ 22 ರಂದು ಇಂದೋರ್ ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮ್ಯಾಚ್ ವೇಳೆ ಪೃಥ್ವಿ ಶಾ ನಿಷೇಧಿತ ವಸ್ತು ಸೇವಿಸಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಮೂತ್ರ ಪರೀಕ್ಷೆ ನಡೆಸಲಾಗಿದ್ದು, ಟೆರ್ಬುಟಾಲಿನ್ ಅನ್ನುವ ನಿಷೇಧಿತ ವಸ್ತುವನ್ನು ಅವರು ಕೆಮ್ಮಿನ ಸಿರಪ್ ನೊಂದಿಗೆ ಸೇರಿಸಿಕೊಂಡು ಸೇವಿದ್ದಾರೆ ಎನ್ನುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆ್ಯಂಟಿ – ಡೋಪಿಂಗ್ ರೂಲ್ಸ್ (ಎಡಿಆರ್) ಆರ್ಟಿಕಲ್ 2.1 ಅಡಿಯಲ್ಲಿ ಅಮಾನತು ಮಾಡಿದೆ.
ಉಸಿರಾಟದ ಸಮಸ್ಯೆಯಿಂದ ಟೆರ್ಬುಟಾಲಿನ್ ಸೇವಿಸಿದ್ದೆ. ಡ್ರಗ್ ಅಂತ ಸೇವಿಸಿರಲಿಲ್ಲ ಎಂದು ಪೃಥ್ವಿ ಪ್ರತಿಕ್ರಿಯಿಸಿದ್ದಾರೆ.
ಸದ್ಯ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದು, ಬಿಸಿಸಿಐ ಮುಂದಿನ ಆದೇಶದ ತನಕ ಕಾಯಬೇಕಿದೆ.
ರಾಹುಲ್ ದ್ರಾವಿಡ್ ಶಿಷ್ಯ, ವರ್ಲ್ಡ್ ಕಪ್ ಹೀರೋ ಪೃಥ್ವಿ ಅಮಾನತು..!
Date: