ಪುನೀತ್ ‘ವಿಜಯ’ದ ಹಿಂದಿನ ಪವರ್ ಅಂತೆ ಆ ಟೀಚರ್..!

Date:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.‌ ಚಂದನವನದ ಟಾಪ್ ನಟ..‌‌ಇಡೀ ಕನ್ನಡ ನಾಡಿನ ಹೆಮ್ಮೆಯ ಮಗ…ಕರುನಾಡ ಮಂದಿಯ ಪ್ರೀತಿಯ ಅಪ್ಪು…ಬಾಲ್ಯದಿಂದಲೂ ಕನ್ನಡಿಗರು ಅಪ್ಪುವನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ…ಅಪ್ಪುವೂ ಅಷ್ಟೇ…ಕನ್ನಡಿಗರನ್ನು, ಕನ್ನಡ ನಾಡು-ನುಡಿಯನ್ನು ಬಹಳ ಪ್ರೀತಿಸ್ತಾರೆ…ಬಾಲ್ಯದಲ್ಲೇ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರೂ ಯಾವುದೇ ಅಹಂ, ಹಮ್ಮು-ಬಿಮ್ಮನ್ನು ಹತ್ತಿರ ಸುಳಿಯದಂತೆ ನೋಡಿಕೊಂಡಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಬಿಡಿ. ಹಾಗೆಯೇ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.


ನಿಮಗೆ ಗೊತ್ತೇ ಇದೆ ಪುನೀತ್ ರಾಜ್ ಕುಮಾರ್ ಜನಪ್ರಿಯ ರಿಯಾಲಿಟಿ ಶೋ ಕೋಟ್ಯಧಿಪತಿ ನಡೆಸಿ ಕೊಡುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ…ಕನ್ನಡದ ಕೋಟ್ಯಧಿಪತಿಯಲ್ಲಿ ಕೋಟಿ ಕನಸುಗಳೊಂದಿಗೆ ಹಾಟ್ ಸೀಟಲ್ಲಿ ಕುಳಿತ ಸ್ಪರ್ಧಿಗಳ ಜೊತೆ ಅಪ್ಪು ಮುಕ್ತವಾಗಿ ಮಾತನಾಡುತ್ತಾರೆ. ಹಾಗೆಯೇ ಒಂದು ಎಪಿಸೋಡ್ ನಲ್ಲಿ ಸ್ಪರ್ಧಿಯೊಂದಿಗೆ ಮಾತನಾಡುತ್ತಾ ತನ್ನ ಸಾಧನೆಯ ಹಿಂದಿನ ಶಕ್ತಿ ಯಾರೆಂಬುದನ್ನು ತಿಳಿಸಿದ್ದಾರೆ.‌ ನಾನು ಆರಂಭಿಕ ಹಂತದಲ್ಲಿ ಶಿಕ್ಷಣ ಪಡೆದಿರಲಿಲ್ಲ.‌ ಬೆಂಗಳೂರಿಗೆ ಬಂದಾಗ ಟೂಷನ್ ಗೆ ಸೇರಿಸಿದ್ರು. ನಂಗೆ ಆಗ ವಿಜಯ ಲಕ್ಷ್ಮಿ ಅನ್ನೋ ಟೀಚರ್ ಇದ್ರು. ಇವತ್ತು ನಾನಿಲ್ಲಿ ಇರುವುದಕ್ಕೆ ಕಾರಣವೇ ಅವರು.‌ ನಾನು ಇಂಗ್ಲಿಷ್ ಮಾತಾಡ್ತೀನಿ..ಇತಿಹಾಸ, ವಿಜ್ಞಾನ ಎಲ್ಲಾ ಸ್ವಲ್ಪ ಸ್ವಲ್ಪ ತಿಳ್ಕೊಂಡಿದ್ದೀನಿ‌.ಓದ್ತೀನಿ..ಬರೀತೀನಿ…ಒಟ್ನಲ್ಲಿ ನಾನೇನು ಆಗಿದ್ದೇನೋ ಅದಕ್ಕೆ ಕಾರಣ ವಿಜಯಲಕ್ಷ್ಮೀ ಟೀಚರೇ ಅಂತ ಅಪ್ಪು ಬಹಳ ಪ್ರೀತಿ , ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ‌ ಮೂಲಕ ಅಪ್ಪು ತನ್ನ ಸಾಧನೆಯ ಹಿಂದಿನ ಪವರ್ ಯಾರು ಅನ್ನೋದನ್ನು ಸಾರಿದ್ದಾರೆ…ಪವರ್ ಸ್ಟಾರ್ ಪುನೀತ್ ಅವರ ಇಂಥಾ ಪ್ರೀತಿಯ ‌ಹಾಗೂ ಡೌನ್ ಟು ಅರ್ಥ್ ಗುಣವೇ ಎಲ್ಲರಿಗೂ ಇಷ್ಟವಾಗುವುದು….

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...