ಆಕಾಂಕ್ಷಿಗಳು ಸಚಿವಸಂಪುಟ ರಚನೆಗಾಗಿ ಕಾಯುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಯಡಿಯೂರಪ್ಪ ಅವರಿಗೆ ಕರೆಮಾಡಿ ಆಗಸ್ಟ್ 9 ರಂದು ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮೊದಲು ಆಗಸ್ಟ್ 7 ರಂದು ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಈಗಾಗಲೇ ಸಚಿವ ಸಂಪುಟ ಸೇರಲಿರುವವರ ಪಟ್ಟಿಯನ್ನು ಅಮಿತ್ ಶಾ ಸಿದ್ದಪಡಿಸಿದ್ದು, ಆ ಪ್ರಕಾರವೇ ಸಚಿವ ಸಂಪುಟ ರಚನೆಗೆ ಸೂಚನೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಸಂಪುಟ ಸೇರಲು ಲಾಬಿ ಮಾಡುವವರಿಗೆ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ಯಡಿಯೂರಪ್ಪ ಸಿದ್ಧಪಡಿಸಿದ ಪಟ್ಟಿ ಮತ್ತು ಅಮಿತ್ ಶಾ ಅವರ ಪಟ್ಟಿಯನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಹೇಳಲಾಗ್ತಿದೆ .