‘ಕುರುಕ್ಷೇತ್ರ’ದ ಕೃಷ್ಣ ರವಿಚಂದ್ರನ್​ ಶೂಟಿಂಗ್ ಸೆಟ್​​ಗೆ ಕಾಲಿಟ್ಟಾಗ ಆಗಿದ್ದೇನು..!? ಕುರುಕ್ಷೇತ್ರದಿಂದ ಬಂದ ಬಿಗ್ ನ್ಯೂಸ್..!

Date:

ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಹೊಸ ರೂಪ ಕೊಟ್ಟ ಶಿಲ್ಪಿ. ರವಿಚಂದ್ರನ್ ಸಿನಿಮಾಗಳೇ ಹಾಗೇ ಎಲ್ಲಾ ಕಾಲಕ್ಕೂ ಒಪ್ಪಿತವಾಗುತ್ತವೆ. ರವಿಚಂದ್ರನ್ ಎನ್ನುವ ಹೆಸರೇ ಹೊಸತನ, ಸೃಜನಶೀಲತೆ..! ಮಾಡುವ ಯಾವುದೇ ಸಿನಿಮಾ ಆಗಿರಲಿ… ಅದು ಮೊದಲು ತನ್ನ ಮನಸ್ಸಿಗೆ ಒಪ್ಪ ಬೇಕು.. ಆಮೇಲೆಯೇ ಅವರು ಮುಂದಿನ ಹೆಜ್ಜೆ ಇಡುವುದು.
ರವಿಚಂದ್ರನ್ ಬಗ್ಗೆ ಇಷ್ಟು ದೊಡ್ಡದಾಗಿ ಪೀಠಿಕೆ ಹಾಕಲು ಕಾರಣ ಕುರುಕ್ಷೇತ್ರ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ಶಶಿಕುಮಾರ್, ನಿಖಿಲ್​ ಕುಮಾರಸ್ವಾಮಿ, ರವಿಶಂಕರ್ ಸೇರಿದಂತೆ ಅನೇಕ ಖ್ಯಾತನಾಮರು ನಟಿಸುತ್ತಿದ್ದಾರೆ. ಅವರುಗಳಲ್ಲಿ ಚಂದನವನದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಒಬ್ಬರು.
ರವಿಚಂದ್ರನ್ ಕುರುಕ್ಷೇತ್ರ ಸಿನಿಮಾದಲ್ಲಿ ಕೃಷ್ಣನ ಪಾತ್ರ ಮಾಡುತ್ತಿದ್ದಾರೆ. ಅವರು ಮೊದಲ ದಿನ ಶೂಟಿಂಗ್​ಗೆ ಬಂದಾಗ ಕೃಷ್ಣನ ಪಾತ್ರಕ್ಕೆ ಅವರನ್ನು ರೆಡಿಮಾಡಲಾಗಿತ್ತಂತೆ. ಆಗ ಕನ್ನಡಿಗ ಮುಂದೆ ಕೃಷ್ಣನ ಅವತಾರದಲ್ಲಿ ತಮ್ಮನ್ನು ತಾವು ಕಂಡ ರವಿಚಂದ್ರನ್​ ಇದು ನಂಗೆ ಒಪ್ಪುತ್ತಿಲ್ಲ ಎಂದು ಕೂಡಲೇ ರವಿಚಂದ್ರನ್ ನಿರ್ಮಾಪಕ ಮುನಿರತ್ನಗೆ ಕಾಲ್ ಮಾಡಿ, ಈ ಕಾಸ್ಟ್ಯೂಮ್ ನಂಗೆ ಒಪ್ಪುತ್ತಿಲ್ಲ.. ಬೇರೆ ಮಾಡಿಸಿಕೊಳ್ತೀನಿ ಅಂದ್ರಂತೆ.. ಆಗ ಮುನಿರತ್ನ.. ಹೇಗೆ ಬೇಕೋ ಹಾಗೆ ಮಾಡಿಸಿಕೊಳ್ಳಿ ..ನಿಮ್ಮಿಷ್ಟ ಅಣ್ಣ ಅಂತ ಪ್ರೀತಿಯಿಂದ ಹೇಳಿದ್ರಂತೆ..! ಅಲ್ಲಿಂದಲೇ ಚೆನ್ನೈಗೆ ಫೋನ್ ಮಾಡಿ ರವಿಚಂದ್ರನ್ ಬೇಕಂದಂತೆ ವಿವರ ನೀಡಿ ತಮ್ಮ ಕಾಸ್ಟ್ಯೂಮ್ ರೆಡಿ ಮಾಡಿಸಿಕೊಂಡ್ರಂತೆ..!


ಹೊಸ ಕಾಸ್ಟ್ಯೂಮ್ ಹಾಕಿಕೊಂಡು ರವಿಚಂದ್ರನ್ ಶೂಟಿಂಗ್ ವ್ಯಾನ್​ನಿಂದ ಬರ್ತಿದ್ದಂತೆ ಅಲ್ಲಿದ್ದವರಿಗೆ ಸಾಕ್ಷಾತ್ ಕೃಷ್ಣನ ದರ್ಶನವೇ ಆದ್ದಂತಾಯಿತಂತೆ..! ಅಲ್ಲಿದ್ದವರು ರವಿಚಂದ್ರನ್ ಕಾಲಿಗೆ ನಮಸ್ಕರಿಸಿದರಂತೆ..!
ಕುರುಕ್ಷೇತ್ರ ನಾಗಣ್ಣ ನಿರ್ದಶನದ ಸಿನಿಮಾ. ಆಗಸ್ಟ್ 9ಕ್ಕೆ ರಿಲೀಸ್ ಆಗುತ್ತಿದೆ. ಬಿಗ್ ಬಜೆಟ್ ಮೂವಿಯಾಗಿದ್ದು ಪಂಚ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅದೇ ದಿನ ಕೋಮಲ್ ನಟನೆಯ ಕೆಂಪೇಗೌಡ -2, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಿಮಿಕ್ ಕೂಡ ತೆರೆಗೆ ಬರುತ್ತಿವೆ ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...