ನ್ಯಾಷನಲ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ ಸಿಂಡ್ರೆಲಾ ಕನ್ನಡ ಚಿತ್ರರಂಗದ ಸೂಪರ್ ಜೋಡಿ..! ರೀಲ್ & ರಿಯಲ್ ಲೈಫ್ನಲ್ಲೂ ಇದು ಮುದ್ದಾದ ಜೋಡಿಯೇ.
ಕಿರುತೆರೆಗೆ ಒಟ್ಟಿಗೇ ಎಂಟ್ರಿಕೊಟ್ಟು, ಬೆಳ್ಳಿ ತೆರೆಗೂ ಒಟ್ಟಿಗೇ ಪದಾರ್ಪಣೆ ಮಾಡಿದರು. ಸಿನಿಮಾಗಳಲ್ಲಿ ಜೊತೆ ಜೊತೆಯಲಿ ನಟಿಸಿದ ಇವರಿಬ್ಬರಲ್ಲೂ ಗೊತ್ತೋ ಗೊತ್ತಾಗದಂತೆ ಪ್ರೀತಿ ಹುಟ್ಟಿತ್ತು. ಅರಳಿದ ಪ್ರೀತಿಗೆ ಎರಡೂ ಕುಟುಂಬದ ಒಪ್ಪಿಗೆಯೂ ಸಿಕ್ಕಿತು. ಮನೆಯವರನ್ನು ಒಪ್ಪಿಸಿ ಇಬ್ಬರು ದಾಂಪತ್ಯಕ್ಕೂ ಕಾಲಿಟ್ಟಿದ್ದಾರೆ. ಇಬ್ಬರ ಪ್ರೀತಿಗೆ ಮುದ್ದಾದ ಹೆಣ್ಣುಮಗು ಕೂಡ ಸಾಕ್ಷಿಯಾಗಿದ್ದಾಳೆ. ಒಂದೇ ಮಾತಲ್ಲಿ ಹೇಳುವುದಾದರೆ ಯಶ್ ಮತ್ತು ರಾಧಿಕಾರದ್ದು ಹೇಳಿ ಮಾಡಿಸದ ಜೋಡಿ.. ಸ್ವರ್ಗದಲ್ಲೇ ನಿಶ್ಚಯವಾದ ದಾಂಪತ್ಯ..!
ಮದುವೆಯಾಗಿ ಮೂರು ವರ್ಷವಾದ ಮೇಲೆ ರಾಧಿಕಾ ಪಂಡಿತ್ ತಾನೇಕೆ ಯಶ್ ಅವರನ್ನೇ ಮದುವೆಯಾದೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಸ್ನೇಹಿತರ ದಿನದಲ್ಲಿ ಈ ಸೀಕ್ರೇಟನ್ನು ರಾಧಿಕಾ ಬಿಚ್ಚಿಟ್ಟಿದ್ದು ಭಾರಿ ವೈರಲ್ ಆಗುತ್ತಿದೆ. ಎಲ್ಲಿ ನೋಡಿದರೂ ಇದೇ ಮಾತು.. ಅದೇ ಪ್ರೀತಿಯ ಸಂದೇಶ.. ವೈಹಾಕಿಕ ಜೀವನಕ್ಕೆ ರಾಧಿಕಾ ಕೊಟ್ಟ ಆ ಮೆಸೇಜ್..!
ಹೌದು, ರಾಧಿಕಾ ಪಂಡಿತ್ ತಾನೇಕೆ ಯಶ್ ಅವರನ್ನೇ ಮದುವೆಯಾದೆ ಎನ್ನುವ ರಹಸ್ಯವನ್ನು ಬಿಚ್ಚಿಡುವುದರ ಜೊತೆಗೆ ಒಂದೊಳ್ಳೆ ಸಂದೇಶವನ್ನೂ ಕೂಡ ನೀಡಿದ್ದಾರೆ. ಒಳ್ಳೆಯ ಸ್ನೇಹಿತನನ್ನು ಮದುವೆಯಾದರೆ ಜೀವನ ಚೆನ್ನಾಗಿರುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು. ಹಾಗಾಗಿ ನಾನು ಯಶ್ ಅವರನ್ನು ಮದುವೆಯಾದೆ ಎಂದಿದ್ದಾರೆ ರಾಧಿಕಾ. ಇದು ಸುಖಿ ದಾಂಪತ್ಯಕ್ಕೆ ನಮ್ಮ ಸ್ಯಾಂಡಲ್ವುಡ್ ಬ್ಯೂಟಿ ರಾಧಿಕಾ ನೀಡಿರುವ ಮೆಸೇಜ್ ಕೂಡ ಹೌದು.
‘ಸದ್ಯ ರಾಧಿಕಾ ಪಂಡಿತ್ ಅವರ ಕಮ್ ಬ್ಯಾಕ್ ಮೂವಿ ಆದಿ ಲಕ್ಷ್ಮಿ ಪುರಾಣ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿದ ಕೆಜಿಎಫ್ ನ ಎರಡನೇ ಚಾಪ್ಟರ್, ಅಂದರೆ ಕೆಜಿಎಫ್ ಚಾಪ್ಟರ್ 2ನ ಶೂಟಿಂಗ್ನಲ್ಲಿ ಯಶ್ ಬ್ಯುಸಿ ಇದ್ದಾರೆ.
ಯಶ್ ಅವರನ್ನೇ ರಾಧಿಕ ಮದ್ವೆಯಾಗಿದ್ದೇಕೆ..? ರಾಧಿಕ ಬಿಚ್ಚಿಟ್ಟ ಆ ರಹಸ್ಯವೇನು..!
Date: