ಸಚಿವರಾಗುವವರ ಒಟ್ಟು 3 ಪಟ್ಟಿ ಬಿಜೆಪಿ ಕೇಂದ್ರ ನಾಯಕರ ಬಳಿ ಇದೆ ಎಂದು ಹೇಳಲಾಗಿದ್ದು, ಒಂದು ಪಟ್ಟಿಯನ್ನು ಯಡಿಯೂರಪ್ಪನವರು ಸಲ್ಲಿಸಿದ್ದರೆ, ಮತ್ತೊಂದು ಪಟ್ಟಿ ಬಿ.ಎಲ್. ಸಂತೋಷ್ ಅವರದ್ದಾಗಿದೆ.
ಇನ್ನು ಪಕ್ಷದ ರಾಷ್ಟ್ರಾಧ್ಯಕ್ಷರು ಅಮಿತ್ ಶಾ ತಮ್ಮದೇ ಮೂಲಗಳಿಂದ ಮತ್ತೊಂದು ಪಟ್ಟಿಯನ್ನು ತರಿಸಿಕೊಂಡಿದ್ದಾರೆನ್ನಲಾಗಿದೆ. ಮೂರು ಪಟ್ಟಿಗಳ ಪರಿಶೀಲನೆ ನಂತರವೇ ಸಚಿವರಾಗುವವರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ
ಅದರಂತೆ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಗೋವಿಂದ ಕಾರಜೋಳ, ಮಾಧುಸ್ವಾಮಿ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ಆರ್. ಅಶೋಕ್, ಅರವಿಂದ ಲಿಂಬಾವಳಿ, ಕೋಟಾ ಶ್ರೀನಿವಾಸ ಪೂಜಾರಿ, ಬಸನಗೌಡ ಪಾಟೀಲ್ ಯತ್ನಾಳ್, ಕೆಜಿ ಬೋಪಯ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಸುನಿಲ್ ಕುಮಾರ್ ಸೇರಿದಂತೆ ಹಲವರ ಹೆಸರುಗಳು ಕೇಳಿಬರುತ್ತಿವೆ.