ಮಾಜಿ ಪ್ರಧಾನಿ ಹಾಗೂ ಹಿರಿಯ ಕಾಂಗ್ರೆಸ್ಸಿಗ ಮನಮೋಹನ್ ಸಿಂಗ್ ರಾಜಸ್ತಾನದಿಂದ ಆಯ್ಕೆ ಬಯಸಿ, ರಾಜ್ಯಸಭಾ ಕಣಕ್ಕೆ ಇಳಿಯಲಿದ್ದಾರೆ.
86 ವರ್ಷದ ಮನಮೋಹನ್ ಸಿಂಗ್ ಆಗಸ್ಟ್ 13 ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ರಾಜಸ್ತಾನದ ಬಿಜೆಪಿ ಘಟಕದ ಅಧ್ಯಕ್ಷ ಮದನ್ ಲಾಲ್ ಸೈನಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಈಗ ಚುನಾವಣೆ ನಡೆಯಲಿದೆ. ರಾಜಸ್ತಾನದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮದನ್ ಲಾಲ್ ರಾಜ್ಯಸಭೆಗೆ ಕಳೆದ ವರ್ಷ ಆಯ್ಕೆಯಾಗಿದ್ದರು.