ಇಂದು ಮೈಸೂರಿನಲ್ಲಿ ನೆರೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಕುಮಾರಸ್ವಾಮಿಯವರು ರಾಜ್ಯದ ನೆರೆ ನಿರ್ವಹಣೆ ಯಡಿಯೂರಪ್ಪ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ .ಮೊದಲು ಅವರು ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು . ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ ಮೊದಲು ನೊಂದವರಿಗೆ ನೆರವಾಗಬೇಕು .
ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿ ಸರಿಯಿಲ್ಲ ಎಂಬ ಹೇಳಿಕೆಯನ್ನು ಯಡಿಯೂರಪ್ಪ ಅವರು ಕೊಡುವಂತಿಲ್ಲ ಏಕೆಂದರೆ ರಾಜ್ಯದ ಖಜಾನೆಯಲ್ಲಿ ಎಂಟು ಸಾವಿರ ಕೋಟಿ ಹಣವಿದೆ ಎಂದರು ,
ನಾನು ಇನ್ನೂ ಎರಡು ದಿನ ಮೈಸೂರಿನಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿಯವರು ಹೇಳಿದರು .