ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಟಿವಿ, ಮೊಬೈಲ್, ಕಂಪ್ಯೂಟರ್ ಇರುತ್ತದೆ, ಯತೇಚ್ಛವಾಗಿ ಇವನ್ನು ನೋಡುವುದರಿಂದ ನಮ್ಮ ಕಣ್ಣುಗಳಿಗೆ ಹಾನಿ ಆಗುವುದು ಗ್ಯಾರೆಂಟಿ
ಟಿವಿಯನ್ನು ನಿಯಮಿತ ದೂರದಿಂದ ನೋಡದೆ ಹೋದರೆ ಸ್ವಲ್ಪ ಸಮಯದಲ್ಲಿಯೇ ಕಣ್ಣಿಗೆ ಸಂಬಂಧಪಟ್ಟಂತಹ ಕಾಯಿಲೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ರಾತ್ರಿ ವೇಳೆಯಲ್ಲಿ ಟಿವಿ ನೋಡುವಾಗ ಕೋಣೆಯಲ್ಲಿ ಲೈಟ್ ಆರಿಸಬಾರದು.
ಟಿವಿಯನ್ನು ಕತ್ತಲೆಯಲ್ಲಿ ನೋಡಲೇಬಾರದು. ಯಾಕೆಂದರೆ ಟಿವಿಯಿಂದ ಹೊರಬರುವ ಬೆಳಕಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅತಿನೇರಳೆ ಕಿರಣಗಳು ಇರುವುದರಿಂದ ಕಣ್ಣಿನಲ್ಲಿರುವ ರೆಟೀನಾಗೆ ಹಾನಿಯುಂಟುಮಾಡುತ್ತದೆ.
ಕೋಣೆಯಲ್ಲಿ ಲೈಟ್ ಇದ್ದರೆ ಆ ಬೆಳಕಿನ ಕಿರಣಗಳ ಜೊತೆ ಅತಿನೇರಳೆ ಕಿರಣಗಳು ಒಂದಾಗಿ ಕಣ್ಣಿನ ಮೇಲೆ ಬೀಳುವುದಾಗಲಿ, ರೆಟೀನಾಗೆ ಹಾನಿ ಉಂಟು ಮಾಡುವಂತಹ ತೀವ್ರತೆ ಮಾಡುತ್ತದೆ. ಹಗಲಿನಲ್ಲಿ ಆದರೆ ಸೂರ್ಯನ ಕಿರಣಗಳು ಇದ್ದೇ ಇರುತ್ತದೆ.
ಟಿವಿಯನ್ನು ಕನಿಷ್ಠ ಐದರಿಂದ ಆರು ಅಡಿಗಳ ದೂರದಿಂದ ನೋಡಬೇಕು.