ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೋಟೆಲ್ ವಾಸ್ತವ್ಯವನ್ನು ವಿರೋಧ ಪಕ್ಷದ ನಾಯಕರು ಟೀಕಿಸಿದ ಸಂದರ್ಭದಲ್ಲಿ ಅದಕ್ಕೆ ಸಮರ್ಥನೆ ನೀಡಿದ್ದ ಕುಮಾರಸ್ವಾಮಿಯವರು, ಅದು ನನ್ನ ಅದೃಷ್ಟದ ಕೊಠಡಿ. ನಾನು ಅಲ್ಲಿದ್ದ ಸಂದರ್ಭದಲ್ಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರು ಕರೆ ಮಾಡಿ ಮುಖ್ಯಮಂತ್ರಿ ಸ್ಥಾನದ ಆಫರ್ ಮುಂದಿರಿಸಿದ್ದರು ಎಂದು ಹೇಳಿದ್ದರು.
ಅಲ್ಲದೆ, ಹೋಟೆಲ್ ಬಾಡಿಗೆಯನ್ನು ನನ್ನ ಸ್ವಂತ ಖರ್ಚಿನಿಂದ ಪಾವತಿಸುತ್ತಿದ್ದೇನೆ.ಸರ್ಕಾರಿ ಕಾರನ್ನು ಸಹ ನಾನು ಪಡೆದಿಲ್ಲ. ಡೀಸೆಲ್ ವೆಚ್ಚವನ್ನು ಕೂಡ ಸರ್ಕಾರದ ಬೊಕ್ಕಸದಿಂದ ಪಡೆದುಕೊಂಡಿಲ್ಲ ಎಂದು ಹೇಳಿದ್ದರು. ಇದೀಗ ಕುಮಾರಸ್ವಾಮಿಯವರು ತಾವು ಅಧಿಕಾರ ಕಳೆದುಕೊಂಡ 22 ದಿನಗಳ ಬಳಿಕ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ಜೆ.ಪಿ. ನಗರದ ತಮ್ಮ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ.