ಆ ವೆಬ್​ ಸೈಟ್​​ನವರೇ ಕುರುಕ್ಷೇತ್ರ ಕದ್ದಿದ್ದಾರೆ..!

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಸೆಟ್ಟೇರಿದಲ್ಲಿಂದಲೂ ಬಹಳಷ್ಟು ಸದ್ದು ಮಾಡಿತ್ತು. ಪೋಸ್ಟರ್, ಟೀಸರ್, ಟ್ರೇಲರ್, ಸಾಂಗ್​ಗಳಿಂದ ಸೌಂಡು ಮಾಡಿ, ಯೂಟ್ಯೂಬ್​ನಲ್ಲಿ ಟ್ರೆಂಡ್ ಸೆಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿ ಆಗಸ್ಟ್ 9ಕ್ಕೆ ಥಿಯೇಟರ್​ಗೆ ಲಗ್ಗೆ ಇಟ್ಟಿತ್ತು. ನಿರೀಕ್ಷೆಗೂ ಮೀರಿ ಸದ್ದು ಮಾಡಿತು.. ಯಶಸ್ವಿ ಪ್ರದರ್ಶನವನ್ನೂ ಕಂಡಿತು.
ದರ್ಶನ್ ಅವರು ಮಾತ್ರವಲ್ಲದೆ ರೆಬೆಲ್ ಸ್ಟಾರ್​ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿಕುಮಾರ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಸೋನುಸೂದ್, ಡ್ಯಾನಿಷ್ ಅಕ್ತರ್ ಸೇರಿದಂತೆ ಅನೇಕ ಸ್ಟಾರ್ ನಟರು ಕುರುಕ್ಷೇತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮುನಿರತ್ನ ನಿರ್ಮಾಣದ ಈ ಸಿನಿಮಾಕ್ಕೆ ನಾಗಣ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ.
ವಾರದ ನಂತರವೂ ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರಕ್ಕೆ ಈಗ ಪೈರಸಿ ಕಾಟ ಎದುರಾಗಿದೆ. ಇದೇ ದರ್ಶನ್ ಅವರ ಯಜಮಾನ, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ನಟ ಸಾರ್ವಭೌಮ ಮೊದಲಾದ ಸಿನಿಮಾಗಳನ್ನು ರಿಲೀಸ್ ಆದ ದಿನವೇ ಲೀಕ್ ಮಾಡಿದ್ದ ವೆಬ್​ ಸೈಟ್ ಈಗ ಕುರುಕ್ಷೇತ್ರವನ್ನೂ ಲೀಕ್ ಮಾಡಿದೆ.
ಆಗಸ್ಟ್ 9ಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಅದಾದ ಮೇಲೆ ಆಗಸ್ಟ್ 15ಕ್ಕೆ ತಮಿಳಿನಲ್ಲೂ ರಿಲೀಸ್ ಆಗಿತ್ತು. ವಾರಾಂತ್ಯಕ್ಕೆ 30 ಕೋಟಿ ಹಣವನ್ನು ಬಾಚಿ ಕೊಂಡಿದೆ. ಆದರೆ, ಎರಡನೇ ವಾರಕ್ಕೆ ಕಾಲಿಡುತ್ತಿದ್ದು ಪೈರಸಿ ಕಂಟಕ ಎದುರಾಗಿದೆ.


ಹೌದು, ತಮಿಳಿನಲ್ಲಿ ತೆರೆಕಂಡ ದಿನವೇ, ಅಂದರೆ ಆಗಸ್ಟ್ 15ಕ್ಕೆ ಸಿನಿಮಾ ಲೀಕ್ ಆಗಿದೆ. ತಮಿಳು ರಾಕರ್ಸ್​ ಕುರುಕ್ಷೇತ್ರವನ್ನು ಲೀಕ್ ಮಾಡಿದ ಕಿಡಿಗೇಡಿಗಳು. ಈ ವೆಬ್​ ಸೈಟ್​ವರು ಈ ಹಿಂದೆಯೂ ಸಾಕಷ್ಟು ಸಿನಿಮಾಗಳನ್ನು ಕದ್ದಿದ್ದರು. ಈಗ ಕುರುಕ್ಷೇತ್ರಕ್ಕೆ ಇವರ ತಲೆ ನೋವು ಎದುರಾಗಿದೆ. ಇದರಿಂದ ಕುರುಕ್ಷೇತ್ರ ಗಳಿಕೆಗೂ ನಷ್ಟ ಎದುರಾಗಿದೆ. ಇನ್ನು ಕುರುಕ್ಷೇತ್ರ 3 ಡಿ ಮತ್ತು 2ಡಿ ವರ್ಷನ್​ನಲ್ಲಿ ರಿಲೀಸ್ ಆಗಿದ್ದು, ನಿರೀಕ್ಷೆಗೂ ಮೀರಿ ಚೆನ್ನಾಗಿ ಮೂಡಿ ಬಂದಿದೆ.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...