ಬದಲಾವಣೆ ಸಹಜ..ಯಾರ ಲೈಫ್, ಯಾವ ರೀತಿ? ಹೇಗೆ? ಯಾವ ಸಂದರ್ಭದಲ್ಲಿ ಬದಲಾಗುತ್ತೆ ಅನ್ನೋದು ಹೇಳುವುದು ಕಷ್ಟ..! ಹೀಗೆ ನಮ್ಮ ಸ್ಯಾಂಡಲ್ವುಡ್ನಲ್ಲಿ ಹಾಸ್ಯ ನಟನಾಗಿ ಸಾಕಷ್ಟು ಸಿನಿಮಾಗಳ ಮೂಲಕ ವೀಕ್ಷಕರನ್ನು ಅಭಿಮಾನಿಗಳನ್ನು ನಗುವಿನ ಕಡಲಲ್ಲಿ ತೇಲಿಸಿರುವ ನಟ ಕೋಮಲ್ ಕೂಡ ಬದಲಾಗಿದೆ. ಪಕ್ಕಾ ಕಾಮಿಡಿಯನ್ ಆಗಿದ್ದ ಕೋಮಲ್ ಈಗ ಮಾಸ್ ಹಿರೋ ಆಗುವ ಮೊದಲ ಹೆಜ್ಜೆಯಲ್ಲಿ ಗೆದ್ದಿದ್ದಾರೆ..!
ಕೋಮಲ್ 3 ವರ್ಷಗಳ ಬಳಿಕ ಹೊಸ ಅವತಾರದೊಂದಿಗೆ ಕಮ್ಬ್ಯಾಕ್ ಆಗಿದ್ದಾರೆ. ಈ ಬಗ್ಗೆ ನಿಮಗೂ ಗೊತ್ತಿದೆ. ಕೆಂಪೇಗೌಡ -2 ಸಿನಿಮಾ ಮೂಲಕ ಕೋಮಲ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಜನರ ಮುಂದೆ ಬಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಬಹು ದೊಡ್ಡ ತಾರಾಗಣದ ಕುರುಕ್ಷೇತ್ರ ಸಿನಿಮಾ ರಿಲೀಸ್ ಆದ ದಿನವೇ ಕೆಂಪೇಗೌಡ -2 ರಿಲೀಸ್ ಆಗಿತ್ತು. ಕುರುಕ್ಷೇತ್ರ ಆಗಸ್ಟ್ 2ಕ್ಕೆ ರಿಲೀಸ್ ಆಗುತ್ತದೆ ಎಂದುಕೊಂಡು ಕೆಂಪೇಗೌಡ-2 ಅನ್ನು ಆಗಸ್ಟ್ 9ಕ್ಕೆ ರಿಲೀಸ್ ಮಾಡಲು ಡೇಟ್ ಫಿಕ್ಸ್ ಮಾಡಲಾಗಿತ್ತು. ಆದರೆ, ಬದಲಾದ ಬೆಳವಣಿಗೆಯಲ್ಲಿ ಕುರುಕ್ಷೇತ್ರ ಆಗಸ್ಟ್ 9ಕ್ಕೆ ರಿಲೀಸ್ ಆಯ್ತು. ಆದರೂ ಕುರುಕ್ಷೇತ್ರದ ಅಬ್ಬರದ ನಡುವೆ ಕೆಂಪೇಗೌಡ -2 ಒಂದು ಹಂತದ ಮಟ್ಟಿಗೆ ಗೆದ್ದಿದೆ..!
ಕೆಂಪೇಗೌಡ -2 ಯಶಸ್ಸಿನಿಂದ ಕೋಮಲ್ ಫುಲ್ ಖುಷಿಯಾಗಿದ್ದಾರೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದ ಕೋಮಲ್, ಜನರ ರಿಯಾಕ್ಷನ್ಗೆ ಫುಲ್ ಫಿದಾ ಆಗಿದ್ದಾರೆ. ನಾಲ್ಕು ವರ್ಷಗಳ ನನ್ನ ಶ್ರಮ ಸಾರ್ಥಕವಾಯ್ತು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಈ ಸಂತಸದ ಬೆನ್ನಲ್ಲೇ ಈಗ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಕಥೆ-ಚಿತ್ರಕಥೆಯಲ್ಲಿ ಬ್ಯುಸಿಯಾಗಿರೋ ಕೋಮಲ್, ‘ಕೋಂಕಾ ಪಾಸ್’ ಎನ್ನುವ ಸಿನಿಮಾ ಮಾಡೋದು ಖಚಿತ ಎಂಬ ಮಾತು ಕೇಳಿ ಬಂದಿದೆ.
ಕೋಂಕಾ ಪಾಸ್ ಎನ್ನುವ ಸಿನಿಮಾಕ್ಕೆ ಕಥೆ-ಚಿತ್ರಕಥೆ ಬರೆಯುತ್ತಿದ್ದಾರೆ ಕೋಮಲ್. ಜೊತೆಗೆ ಈ ಸಿನಿಮಾಕ್ಕೆ ಸ್ವತಃ ಅವರೇ ಬಂಡವಾಳ ಹಾಕಲಿದ್ದಾರೆ. ಮೋಹನ್ ಸಿನಿಮಾಕ್ಕೆ ಮೊದಲಬಾರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ಕೊಂಕಾ ಪಾಸ್ ಇಂಡೋ-ಚೀನಾ ಬಾರ್ಡರ್ ಕಥೆ ಹೇಳುವ ಚಿತ್ರ ಇದಂತೆ..!