ಬಿಜೆಪಿಯ ಸಿಟಿ ರವಿ ಅವರು ನಿನ್ನೆ ಸಚಿವರ ಅಂತಿಮ ಪಟ್ಟಿಯಲ್ಲಿ ಇರುವವರ ಬಗ್ಗೆ ಮಾತನಾಡುತ್ತಿರುವಾಗ ಬಿಎಸ್ ಯಡಿಯೂರಪ್ಪ ಅವರು ಪರಿಶ್ರಮದಿಂದ ಪಕ್ಷ ಕಟ್ಟಿ, ತಮ್ಮದೇ ಆದ ಸ್ವಂತಿಕೆ ಮೇಲೆ ಪಕ್ಷವನ್ನು ಬೆಳೆಸಲು ಮುಂಚೂಣಿ ಸ್ಥಾನದಲ್ಲಿ ನಿಂತವರು. ಅವರ ಸಚಿವ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿಲ್ಲ ಎಂಬ ಕೊರಗು ಇತ್ತು. ಆದರೆ ಈಗ ಆ ಅವಕಾಶವನ್ನು ಬಿಎಸ್‍ವೈ ಅವರು ಪೂರೈಸಿದ್ದಾರೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಯೋಗ ಮತ್ತು ಯೋಗ್ಯತೆ ವರಿಗೆ ಸಚಿವ ಸ್ಥಾನ ಸಿಕ್ಕಿದೆ ಏನನ್ನು ಗುರುತಿಸಿ ಸಚಿವ ಸ್ಥಾನ ಕೊಟ್ಟಿದ್ದಾರೆ ಗೊತ್ತಿಲ್ಲ. ಆದರೆ ಯೋಗ್ಯರನ್ನು ಬೆಳೆಸುವ ಕೆಲಸವನ್ನು ಪಕ್ಷ ನಿರಂತರವಾಗಿ ಮಾಡುತ್ತಾ ಬಂದಿದೆ.