ಬಿಜೆಪಿಯ ನೂತನ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಿಂದ ಬೇಸರವಾಗಿರುವ ಬಿಜೆಪಿಯ ಅತೃಪ್ತ ಶಾಸಕರುಗಳ ಗುಂಪೊಂದು ರಚನೆಯಾಗಿದೆ ಎಂದು ಬಿಜೆಪಿ ವಲಯದಲ್ಲಿ ಸುದ್ದಿ ಕೇಳಿ ಬರುತ್ತಿದೆ . ನಿನ್ನೆ ಹದಿನೇಳು ಜನ ಶಾಸಕರು ಸಚಿವ ಸ್ಥಾನವನ್ನು ಸ್ವೀಕರಿಸಿದರು ಆದರೆ ರಮೇಶ್ ಜಾರಕಿಹೊಳೆ ಹಾಗೂ ರೇಣುಕಾಚಾರ್ಯ ಇನ್ನು ಕೆಲವರು ಅತೃಪ್ತಿಯಲ್ಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ .
ಇದೀಗ ಕುಮಾರಸ್ವಾಮಿಯವರು ಅತೃಪ್ತ ಶಾಸಕರುಗಳ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ಯಡಿಯೂರಪ್ಪನವರ ನೆಮ್ಮದಿ ಕೆಡಿಸಿದೆ ಎಂದು ಹೇಳಲಾಗುತ್ತಿದೆ . ಇದರಿಂದ ನೂತನ ಸರ್ಕಾರಕ್ಕೆ ಏನಾದರೂ ತೊಂದರೆ ಇದೆಯಾ ಎಂಬ ಭಯ ಕೂಡ ಬಿಜೆಪಿ ವಲಯದಲ್ಲಿದೆ ಎನ್ನಲಾಗಿದೆ . ಹಾಗೆಯೇ ನಿನ್ನೆ ಕೂಡ ಸಿಟಿ ರವಿ ಯೋಗ ಮತ್ತು ಯೋಗ್ಯತೆ ಇದ್ದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂಬ ಹೇಳಿಕೆ ತುಂಬಾ ವಿವಾದಕ್ಕೀಡಾಗಿದೆ . ಇದರಿಂದ ಬಿಜೆಪಿ ವಲಯದಲ್ಲಿ ಅತೃಪ್ತರ ಗುಂಪೊಂದು ರಚನೆಯಾಗಿದೆ . ಹಾಗೆಯೇ ಉಮೇಶ್ ಕತ್ತಿ ಅವರು ಕೂಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ .