ಟೀಮ್ ಇಂಡಿಯಾದಲ್ಲಿ ಮತ್ತೆ ಆಡ್ತಾರಾ ಶ್ರೀಶಾಂತ್?

Date:

ಎಸ್​. ಶ್ರೀಶಾಂತ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ಮಿಂಚಿದ್ದ ವೇಗಿ.. 2007ರ ಒಡಿಐ, ಟಿ20 ಮತ್ತು 2011ರ ಒಡಿಐ ವಿಶ್ವಕಪ್​ನಲ್ಲಿ ಸ್ಥಾನ ಪಡೆದಿದ್ದರು. ಟೀಮ್ ಇಂಡಿಯಾ ಪರ ಆಡಿ ವಿಶ್ವ ಕ್ರಿಕೆಟ್​ನಲ್ಲಿ ತನ್ನದೇಯಾದ ಚಾಪು ಮೂಡಿಸಿದ್ದರು. 2013ರಲ್ಲಿ ಅವರ ಲೈಫ್​ನಲ್ಲಿ ನಡೆದಿದ್ದ ಆ ಒಂದು ಘಟನೆ ಅವರ ವೃತ್ತಿ ಬದುಕಿಗೇ ಬೆಂಕಿ ಇಟ್ಟಿತ್ತು…
2013ರ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸ್‌ ಆರೋಪದಡಿಯಲ್ಲಿ ಶ್ರೀಶಾಂತ್, ಬಿಸಿಸಿಐನಿಂದ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಆದರೆ, ಶಿಕ್ಷೆಯನ್ನು ಮರು ಪರಿಶೀಲಿಸಿದ ಬಳಿಕ ಬಿಸಿಸಿಐನ ಓಂಬುಡ್ಸ್‌ಮನ್ ಡಿಕೆ ಜೈನ್, ಇದೀಗ ಶಿಕ್ಷೆಯನ್ನು 7 ವರ್ಷಗಳಿಗೆ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಮತ್ತೆ ಟೀಮ್ ಇಂಡಿಯಾ ಪರ ಆಡುವ ವಿಶ್ವಾಸದಲ್ಲಿದ್ದಾರೆ ಶ್ರೀಶಾಂತ್..!
ಶ್ರೀಶಾಂತ್ 6 ವರ್ಷಗಳ ಕಾಲ ನಿಷೇಧ ಶಿಕ್ಷೆಯನ್ನು ಈಗಾಗಲೇ ಅನುಭವಿಸಿದ್ದಾರೆ. ಇನ್ನೊಂದು ವರ್ಷ ಕಳೆದರೆ ಶಿಕ್ಷೆ ಅವಧಿ ಮುಗಿಯುತ್ತದೆ. ಈಗಾಗಲೇ ತನ್ನ ಕ್ರಿಕೆಟ್ ಬದುಕಿನ ಅಮೂಲ್ಯ 6 ವರ್ಷಗಳನ್ನು ಕಳೆದುಕೊಂಡಿದ್ದಾರೆ. ಆ ನಷ್ಟ ಇನ್ನು ಜೀವನದಲ್ಲಿ ಭರಿಸಲು ಸಾಧ್ಯವಿಲ್ಲ. ಆದರೆ ಮತ್ತೊಮ್ಮೆ ಟೀಮ್ ಇಂಡಿಯಾದಲ್ಲಿ ಮಿಂಚುವ ಭರವಸೆ ಅವರದ್ದು.
ಶ್ರೀಶಾಂತ್ ಅವರ ಕ್ರಿಕೆಟ್​ ಬದುಕಿನ ಪ್ರಮುಖ ಘಟ್ಟವೇ ನಿಷೇಧದ ನಡುವೆ ಕಳೆದು ಹೋಗಿದೆ. ಇದೀಗ ಮರು ಹುಟ್ಟು ಪಡೆಯುವ ಇಂಗಿತದಲ್ಲಿರುವ ಶ್ರೀಶಾಂತ್ ತಾನು ಮತ್ತೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ..!
‘ನಾನು ಮೊದಲಿನಿಂದಲೂ ಟೆನಿಸ್ ಸ್ಟಾರ್ ಲಿಯಾಂಡರ್ ಪೇಸ್ ರವರ ಬಹು ದೊಡ್ಡ ಅಭಿಮಾನಿ. ಇಂಥ ವಯಸ್ಸಿನಲ್ಲೂ ಹೇಗಿರಬೇಕು ಅನ್ನೋದನ್ನು ಅವರಿಂದ ಸ್ಫೂರ್ತಿ ಪಡೆದು ಅರಿತಿದ್ದೇನೆ. ನಾನೂ ಧೃತಿಗೆಡಬಾರದು. 38ರ ಹರೆಯದಲ್ಲಿ ಆಶೀಷ್ ನೆಹ್ರಾ ಕೂಡ ವಿಶ್ವ ಟಿ20ಯಲ್ಲಿ ಆಡಿದ್ದರು. ನನಗಿನ್ನೂ 36 ವರ್ಷ..! 42ರ ಹರೆಯದಲ್ಲಿ ಪೇಸ್ ಗ್ರ್ಯಾಂಡ್‌ಸ್ಲ್ಯಾಮ್ ಜಯಿಸಿದ್ದನ್ನು ನೆನೆದಿರುವ ಅವರು ‘ಪೇಸ್, ನೆಹ್ರಾ ಅವರಂತೆ ಸಾಧಿಸಲು ನನಗಿನ್ನೂ ವಯಸ್ಸಿದೆ. ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ,’ ಅಂತ ಹೇಳಿದ್ದು, ಈ ಮೂಲಕ ಟೀಮ್ ಇಂಡಿಯಾದಲ್ಲಿ ಆಡುವ ಆಸೆ ಹೇಳಿಕೊಂಡಿದ್ದಾರೆ.
ಆದರೆ ಶ್ರೀಶಾಂತ್​ಗೆ ಅವಕಾಶ ಸಿಗುವುದು ಬಹುಶಃ ಅನುಮಾನ.. ಯಾಕೆಂದರೆ ಬಿಸಿಸಿಐ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...