ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಂದನವನದ ಇಬ್ಬರು ಸ್ಟಾರ್ ನಟರು. ಸುದೀಪ್ ಮತ್ತು ದರ್ಶನ್ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಿದ್ದಂತೆ. ಈ ಇಬ್ಬರು ಸ್ಟಾರ್ ನಟರು ಒಂದು ಟೈಮ್ನಲ್ಲಿ ಆತ್ಮೀಯ ಗೆಳೆಯರಾಗಿದ್ದರು, ಆದರೆ ಯಾವುದೋ ಒಂದು ಕೆಟ್ಟಗಳಿಗೆ ಅವರಿಬ್ಬರನ್ನು ದೂರ ಮಾಡಿ ಬಹು ದಿನಗಳೇ ಕಳೆದಿವೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುದೀಪ್ ಮತ್ತು ದರ್ಶನ್ ಈಗ ಹಾವು-ಮುಂಗುಸಿಯಂತಾಗಿದ್ದಾರೆ.
ಸುದೀಪ್ ಅವರ ಮನಸ್ಸಿನ ಮೂಲೆಯಲ್ಲಿ ದರ್ಶನ್ಗೆ ಇಷ್ಟು ದಿನ ಒಂದು ಸ್ಥಾನ ಕೊಟ್ಟಿದ್ದರು. ದರ್ಶನ್ ಬಗ್ಗೆ ಸುದೀಪ್ ಅವರಿಗೆ ಪ್ರಶ್ನೆಗಳು ಎದುರಾದಗಲೆಲ್ಲಾ ಅವನು ಇಂದಿಗೂ ನನ್ನ ಗೆಳೆಯನೇ.. ನನ್ನ ಹೃದಯದಲ್ಲಿರುತ್ತಾನೆ ಎಂದು ಸುದೀಪ್ ಹೇಳುತ್ತಿದ್ದರು. ಆದರೆ, ಮೊನ್ನೆ ಮೊನ್ನೆ ದರ್ಶನ್ಗೆ ಸುದೀಪ್ ಬಗ್ಗೆ ಸುದ್ದಿಗಾರರು ಕೇಳಿದಾಗ ದರ್ಶನ್ ನಾನು ಯಾರ ಸ್ನೇಹ ಮಾಡ್ಬೇಕು, ಯಾರ ಜೊತೆ ಮಾತಾಡ್ಬೇಕು, ಮಾತಾಡ್ಬಾರ್ದು, ರಾತ್ರಿ ಹೆಂಡ್ತಿ ಜೊತೆ ಮಲಗಬೇಕಾ? ಬೇಡವಾ? ಎಂದು ಚಾನಲ್ ಅವರನ್ನು ಕೇಳಿ ಮಾಡಬೇಕ ಎಂದಿದ್ದರು. ಅದು ಬಹುಶಃ ಸುದೀಪ್ ಅವರ ಮನಸ್ಸಿಗೆ ಗಾಯ ಮಾಡಿರಬೇಕು. ಪೈಲ್ವಾನ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸುದೀಪ್ ನಾಲಿಗೆ ಬಲ, ತೋಳ್ಬಲ ಹೀಗೆ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡಿದ್ದು ದರ್ಶನ್ಗೆ ಟಕ್ಕರ್ ಕೊಟ್ಟಂತಿತ್ತು.
ಇಂದು ಪೈಲ್ವಾನ್ ಟ್ರೈಲರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸುದೀಪ್ ಪೈಲ್ವಾನ್ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಟ್ವೀಟರ್ನಲ್ಲಿ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ದರ್ಶನ್ ಸುದೀಪ್ ನಡುವೆ ಮನಸ್ತಾಪ ಬಂದಾಗಲೇ ಅವರನ್ನು ಅನ್ ಫಾಲೋ ಮಾಡಿದ್ದರು. ಆದರೆ, ಸುದೀಪ್ ದರ್ಶನ್ ಅವರನ್ನು ಇನ್ನೂ ಫಾಲೋ ಮಾಡುತ್ತಿದ್ದರು. ಆದರೆ, ಇಂದು ದಿಢೀರ್ ಅಂತ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದಾರೆ,,! ದರ್ಶನ್ ನೀಡಿದ್ದ ಆ ಒಂದು ಹೇಳಿಕೆ ಎಫೆಕ್ಟಾ ಇದು ಎನ್ನುವುದು ಚರ್ಚೆ ಆಗುತ್ತಿದೆ.
ದರ್ಶನ್ ಸ್ನೇಹಕ್ಕೆ ತುಡಿಯುತ್ತಿದ್ದ ಸುದೀಪ್ ಮನಸ್ಸಿಗೆ ದರ್ಶನ್ ಮಾಡಿದ ಗಾಯದ ಎಫೆಕ್ಟಾ ಇದು..? ಪೈಲ್ವಾನ್ ಸುದೀಪ್ ಏನ್ ಈಗ ಮಾಡಿದ್ದಾರೆ ಗೊತ್ತಾ?
Date: