ಮಾಧ್ಯಮ ಲೋಕದಲ್ಲಿ ಅನೇಕ ಚಾನಲ್ ಗಳಿವೆ. ಆದರೆ, ಲೆಕ್ಕವಿಲ್ಲದಷ್ಟು ಚಾನಲ್ ಗಳ ನಡುವೆ ಬೆರಳೆಣಿಕೆಯಷ್ಟು ಚಾನಲ್ ಗಳು ಮಾತ್ರ ಜನಪ್ರಿಯವಾಗಿವೆ…ಸುದ್ದಿಯಿಂದ ಸದ್ದು ಮಾಡುತ್ತಿವೆ. ಅಂಥಾ ಚಾನಲ್ ಗಳಲ್ಲಿ ಟಿವಿ9 ಕೂಡ ಒಂದು.
ಹೆಸರಾಂತ ಮಾಧ್ಯಮ ಸಂಸ್ಥೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಟಿವಿ9 ಗ್ರೂಪ್ ನ ಸಿಇಒ ಬದಲಾಗಿದ್ದಾರೆ. ಬರನ್ ದಾಸ್ ಅವರು ಟಿವಿ9 ನ ಹೊಸ ಸಿಇಒ ಆಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಈ ಹಿಂದೆ ಸಿಇಒ ಆಗಿ ಸಂಸ್ಥೆಯ ಶ್ರೇಯಾಭಿವೃದ್ಧಿಗೆ ಶ್ರಮಿಸಿದ್ದ ಮಹೇಂದ್ರ ಮಿಶ್ರಾ ಅವರು ಟಿವಿ9 ಗ್ರೂಪ್ ನ ಪ್ರಿನ್ಸಿಪಲ್ ಅಡ್ವೆಸರ್ ಆಗಿ ಇನ್ನು ಮುಂದೆ ಕಾರ್ಯ ನಿರ್ವಹಿಸಲಿದ್ದಾರೆ.
ಬರನ್ ಅವರು ಈ ಹಿಂದ ಜೀ ಮೀಡಿಯಾ ಸಿಇಒ ಆಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ಆ ಸಂಸ್ಥೆಯ ಯಶಸ್ವಿ ಓಟದಲ್ಲಿ ಪ್ರಮುಖರಾಗಿದ್ದರು. ಮೀಡಿಯಾದಲ್ಲಿ ಬರನ್ ಅವರದ್ದು ಸುದೀರ್ಘ 25 ವರ್ಷಗಳ ಅನುಭವ. ಇವರೀಗ ಪ್ರತಿಷ್ಠಿತ ಟಿವಿ9 ಸಂಸ್ಥೆಯಲ್ಲಿ ಸಿಇಒ ಹೊಣೆ ಹೊತ್ತಿರುವುದು ಆ ಸಂಸ್ಥೆಗೆ ಮತ್ತಷ್ಟು ಬಲ ಬಂದಂತಾಗಿದೆ.
ಟಿವಿ9 ಗ್ರೂಪ್ ಗೆ ಹೊಸ ಸಿಇಒ..!
Date: