ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಈ ವರ್ಷ ದರ್ಶನ್ ಅಭಿಮಾನಿಗಳು ಭರಪೂರ ಹಬ್ಬ.. ಸಾಲು ಸಾಲು ಸಿನಿಮಾಗಳನ್ನು ದಚ್ಚು ಅಭಿಮಾನಿಗಳಿಗೆ ನೀಡ್ತಿದ್ದಾರೆ. ದರ್ಶನ್ ಅಭಿನಯದ ಸಾಲು ಸಾಲು ಸಿನಿಮಾಗಳು ಈ ವರ್ಷ ಬರುತ್ತಿವೆ..! ವರ್ಷಾರಂಭದಲ್ಲಿ ಯಜಮಾನನಾಗಿ ಮಿಂಚಿದ ದರ್ಶನ್ ಈಗ ಕುರುಕ್ಷೇತ್ರದ ದುರ್ಯೋಧನನಾಗಿ ಅಬ್ಬರಿಸುತ್ತಿದ್ದಾರೆ.
ಕುರುಕ್ಷೇತ್ರದ ಮೂಲಕ ದರ್ಶನ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಕುರುಕ್ಷೇತ್ರ ಮಲ್ಟಿ ಲಾಂಗ್ವೇಜ್ನಲ್ಲಿ ತೆರೆ ಕಂಡಿದ್ದು ಎಲ್ಲಾ ಕಡೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕುರುಕ್ಷೇತ್ರದ ಬೆನ್ನಲ್ಲೇ ಒಡೆಯನಾಗಿ ಸದ್ದು ಮಾಡಲು ದರ್ಶನ ಬರಲಿದ್ದಾರೆ. ಒಡೆಯ ಸಿನಿಮಾ ನಂತರ ರಾಬರ್ಟ್ ಅವತಾರದಲ್ಲಿ ಡಿ.ಬಾಸ್ ಬರಲಿದ್ದಾರೆ. ರಾಬರ್ಟ್ ಬಳಿಕ ಗಂಡುಗಲಿ ಮದಕಾರಿನಾಯಕನಾಗಿ ದಚ್ಚು ಗರ್ಜಿಸಲಿದ್ದಾರೆ. ಹೀಗೆ ಒಂದರ ಹಿಂದೊಂದು ಸಿನಿಮಾಗಳು ದರ್ಶನ್ ಮುಂದಿವೆ.
ಈ ಎಲ್ಲಾ ಸಿಹಿ ಸುದ್ದಿಗಳ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಮಿಲನ ಪ್ರಕಾಶ್ ದರ್ಶನ್ಗಾಗಿ ಕಥೆ ಬರೆಯುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮಿಲನಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಪ್ರಕಾಶ್ ನಂತರದ ದಿನಗಳಲ್ಲಿ ಮಿಲನ ಪ್ರಕಾಶ್ ಎಂದೇ ಜನಪ್ರಿಯರಾದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾರಕ್ ಸಿನಿಮಾದ ಡೈರೆಕ್ಟರ್ ಇದೇ ಮಿಲನ ಪ್ರಕಾಶ್.
ತಾರಕ್ನಲ್ಲಿ ದರ್ಶನ್ಗೆ ಆ್ಯಕ್ಷನ್ ಕಟ್ ಹೇಳಿದ್ದ ಮಿಲನ ಡೈರೆಕ್ಟರ್ ಮತ್ತೊಂದು ಕಥೆಯನ್ನು ದರ್ಶನ್ಗಾಗಿ ಮಾಡುತ್ತಿದ್ದಾರೆ. ದರ್ಶನ್ ಒನ್ ಲೈನ್ ಸ್ಟೋರಿ ಕೇಳಿ ಸಿನಿಮಾಕ್ಕೆ ಓಕೆ ಅಂದಿದ್ದಾರೆ. ಫಸ್ಟ್ ಹಾಫ್ ಸ್ಕ್ರಿಪ್ಟ್ ಮುಗಿದಿದೆ. ದರ್ಶನ್ ಅವರ ಮದಕರಿ ನಾಯಕ ಸಿನಿಮಾ ಮುಗಿದ ಮೇಲೆ ಈ ಸಿನಿಮಾ ಸೆಟ್ಟೇರಲಿದೆ 2020ರಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ ಎಂದು ಪ್ರಶಾಂತ್ ತಿಳಿಸಿದ್ದಾರೆ.