ಕೆಜಿಎಫ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಅಭಿನಯದ ಕೆಜಿಎಫ್ ಚಿತ್ರ ದೇಶದಾದ್ಯಂತ ಬಹುದೊಡ್ಡ ಸುದ್ದಿ ಮಾಡಿತ್ತು . ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ವಿಶ್ವದಾದ್ಯಂತ ಕನ್ನಡ ಚಿತ್ರರಂಗವನ್ನು ಗುರುತಿಸುವಂತಹ ಹೆಸರು ಮಾಡಿದೆ .
ಇದೀಗ ಕೆಜಿಎಫ್ -2′ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ ಏಕೆಂದರೆ ಕೆಜಿಎಫ್ ನ ಕೆನಡೀಸ್ ಗುಡ್ಡದ ಮೇಲೆ ಚಿತ್ರೀಕರಣ ನಡೆಸಲಾಗಿದೆ. ಗುಡ್ಡದ ಮೇಲೆ ಬೃಹತ್, ದುಬಾರಿ ವೆಚ್ಚದ ಸೆಟ್ ಹಾಕಲಾಗಿದೆ. ಶ್ರೀನಿವಾಸ್ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಚಿತ್ರೀಕರಣಕ್ಕೆ ಸೆಟ್ ಹಾಕುವಾಗ ಕೆಜಿಎಫ್ ಗುಡ್ಡದ ಮೇಲಿದ್ದ ಗಿಡ, ಮರ ಹಾಳು ಮಾಡಿ ಪರಿಸರಕ್ಕೆ ಹಾನಿ ಮಾಡಲಾಗಿದೆ. ಚಿತ್ರೀಕರಣದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ದೂರಿ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿದೆ.