ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ನಲ್ಲಿ ಹಾಕಿರುವ ಪೋಸ್ಟ್ ಭಾರಿ ಸದ್ದು ಮಾಡುತ್ತಿದೆ.
ಇದರಲ್ಲಿರುವ ಮಾತುಗಳನ್ನು ನೋಡಿದ್ರೆ, ಇದು ಯಾರಿಗೊ ನೇರವಾಗಿ ಟಾಂಗ್ ಕೊಟ್ಟಂತಿದೆ.
ಈ ಪೋಸ್ಟ್ ಅರ್ಥ ನಾನು ಐಸ್ ಕ್ಯಾಂಡಿಯಷ್ಟು ಸಿಹಿ, ನೀರಿನಷ್ಟೇ ತಂಪು, ಪ್ರಾಮಾಣಿಕತೆಯಲ್ಲಿ ಯೋಧರಷ್ಟೇ ನಿಷ್ಠೆ, ಎದುರಿಗೆ ಇದ್ದವರು ಹೇಗಿರುತ್ತಾರೋ ಹಾಗೆ ಇರುವೆ ಆದರೆ ಕೆಟ್ಟತನ ತೋರಿಸಿದ್ರೆ ನರಕ ತೋರಿಸುತ್ತೇನೆ ಎಂದು ದರ್ಶನ್ ಯಾರಿಗೆ ಹೇಳಿದ್ದಾರೆ ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳಲ್ಲಿ ಕಾಡ್ತಾ ಇದೆ .
ದರ್ಶನ್ ಅವರು ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಇಂತಹ ಟ್ವೀಟ್ ಗಳನ್ನ ಮಾಡುವುದಿಲ್ಲ
ದಿಢೀರನೆ ಅಂತ ಇಂತಹದೊಂದು ಪೋಸ್ಟ್ ಮಾಡಿರುವುದು ನಿಜಕ್ಕೂ ಡಿ ಬಾಸ್ ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ.
ಕಳೆದ ಮೂರು ದಿನಗಳ ಹಿಂದೆ ರವಿ ಬೆಳಗೆರೆ ಅವರು ದರ್ಶನ್ ಹಾಗೂ ದುನಿಯಾ ವಿಜಿ ಅವರ ಬಗ್ಗೆ ಮಾತನಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಇದರ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ನೇರವಾಗಿ
ರವಿ ಬೆಳಗೆರೆ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎಂಬ ಪ್ರಶ್ನೆ ಹರಿದಾಡ್ತಿದೆ .