ಕೆಜಿಎಫ್ ಚಿತ್ರದ ನಂತರ ರಾಕಿಂಗ್ಸ್ಟಾರ್ ಯಶ್ ಅವರು ರಾಷ್ಟ್ರ ವ್ಯಾಪಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇನ್ನು ಈ ವರ್ಷ ನಡೆದ ಸೈಮಾ ಅವಾರ್ಡ್ ಫಂಕ್ಷನ್ನಲ್ಲಿ ಯಶ್ ಅವರಿಗೆ ಒಟ್ಟು ಎರಡು ಪ್ರಶಸ್ತಿಗಳು ಲಭಿಸಿದವು. ಇದಾದ ಬಳಿಕ ಇತ್ತೀಚೆಗಷ್ಟೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕಾರ್ಯಕ್ರಮವನ್ನು ಯಶ್ ಅವರು ಗ್ರೇಸ್ ಮಾಡಲಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಲಾಗಿತ್ತು.
ಹೌದು ಇದನ್ನು ನೋಡಿದ ಯಶ್ ಅಭಿಮಾನಿಗಳು ಮತ್ತು ಕೆಲ ಕನ್ನಡಿಗರು ಅಣ್ಣಾವ್ರ ನಂತರ ಮತ್ತೊಬ್ಬ ಕನ್ನಡ ನಟ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆಯಲಿದ್ದಾರೆ ಎಂದು ಖುಷಿ ಪಡತೊಡಗಿದರು ಆದರೆ ಅಸಲಿ ವಿಷಯ ಏನೇಂದರೆ ಯಶ್ ಅವರು ಹೋಗುತ್ತಿರುವುದು ಪ್ರಶಸ್ತಿ ಪಡೆಯುವುದಕ್ಕಲ್ಲ ಬದಲಾಗಿ ಆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ.. ಹೌದು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಯಶ್ ಅವರು ಅತಿಥಿಯಾಗಿ ಹೋಗುತ್ತಿದ್ದಾರೆ ಬದಲಾಗಿ ಅವರಿಗೆ ಯಾವುದೇ ರೀತಿಯ ಅವಾರ್ಡ್ ಅನ್ನು ಅಲ್ಲಿ ಕೊಡಲಾಗುವುದಿಲ್ಲ.