ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಹೌದು ಅದು ಸಹ ಮರಳು ಸಾಗಿಸುತ್ತಿರುವವರನ್ನು ತಡೆದ ಕಾರಣಕ್ಕೆ ಯಡಿಯೂರಪ್ಪನವರು ಅಧಿಕಾರಿಗಳ ವಿರುದ್ಧವೇ ಗರಂ ಆಗಿದ್ದಾರೆ. ಮರಳು ಸಾಗಿಸುವುದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ ಯಡಿಯೂರಪ್ಪನವರು ಅದಕ್ಕೆ ಅನುವು ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಏಕೆಂದರೆ ಆ ಮರಳು ಸಾಗಿಸುತ್ತಿರುವವರು ಪ್ರವಾಹದಿಂದ ಮನೆ ಕಳೆದುಕೊಂಡವರು.
ಹೌದು ಇತ್ತೀಚೆಗಷ್ಟೇ ಸಾಗರದ ಬಳಿ ಕೆಲ ಜನ ಪ್ರವಾಹದಿಂದ ಮನೆ ಕಳೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದವರ ಮರಳನ್ನು ಸೀಜ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ದೂರಿನಿಂದ ಕೋಪಗೊಂಡ ಯಡಿಯೂರಪ್ಪನವರು ಪ್ರವಾಹದಿಂದ ಮನೆ ಕಳೆದುಕೊಂಡವರ ಮರಳನ್ನು ಯಾವುದೇ ಕಾರಣಕ್ಕೂ ಸೀಜ್ ಮಾಡಬೇಡಿ ಈ ರೀತಿ ಮಾಡಿದರೆ ನಿಮ್ಮನ್ನು ನೀರಿಲ್ಲದ ಜಾಗಕ್ಕೆ ವರ್ಗಾವಣೆ ಮಾಡುತ್ತೇನೆ ಎಂದು ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.