ಗಣಪತಿ ಚತುರ್ಥಿಗೆ ಸದ್ದಿಲ್ಲದೆ ಸರ್​ಪ್ರೈಸ್ ಗಿಫ್ಟ್ ಕೊಟ್ಟ ಒಡೆಯ ದರ್ಶನ್..!

Date:

ನಾಡಿನೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಹಬ್ಬ ಹರಿದಿನಗಳ ಸಂಭ್ರಮಗಳನ್ನು ಸಿನಿಮಾಗಳು ಕೂಡ ಹೆಚ್ಚಿಸುತ್ತವೆ. ಸಿನಿಮಾ ತಂಡಗಳು ಪೋಸ್ಟರ್, ಟೀಸರ್, ಟ್ರೇಲರ್, ಸಿನಿಮಾ ಹೆಸರು ಅನೌನ್ಸ್, ಸಿನಿಮಾ ರಿಲೀಸ್ ಹೀಗೆ ನಾನಾ ರೀತಿಯಲ್ಲಿ ಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ಕೊಡುತ್ತವೆ.
ಅದರಲ್ಲೂ ಸ್ಟಾರ್​​ ನಟರ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಇನ್ನಿಲ್ಲದ ಕುತೂಹಲ, ನಿರೀಕ್ಷೆಗಳು ಇರುತ್ತವೆ. ಅಂತೆಯೇ ಸ್ಟಾರ್ ನಟರು ಸಹ ಒಂದಲ್ಲ ಒಂದು ಸರ್​ಪ್ರೈಸ್ ಕೊಡುತ್ತಿರುತ್ತಾರೆ. ಈ ವರ್ಷದ ಆರಂಭದಿಂದಲೂ ಅಭಿಮಾನಿಗಳಿಗೆ ಒಂದರ ಹಿಂದೆ ಒಂದು ಗಿಫ್ಟ್ ಕೊಡುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಗಣೇಶ ಹಬ್ಬಕ್ಕೂ ಉಡುಗೊರೆ ನೀಡಿದ್ದಾರೆ.
ವರ್ಷದ ಆರಂಭದಲ್ಲಿ ಯಜಮಾನ ಸಿನಿಮಾ ರಿಲೀಸ್ ಆಗಿತ್ತು. ನಂತರ ಕುರುಕ್ಷೇತ್ರ ಟ್ರೇಲರ್, ಸಾಂಗ್​ಗಳಿಂದ ಅಬ್ಬರಿಸಿತ್ತು. ಇದೀಗ ಆ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಣೇಶ ಹಬ್ಬಕ್ಕೆ ದರ್ಶನ್ ಒಡೆಯನಾಗಿ ಬಂದಿದ್ದಾರೆ. ತಮಿಳಿನ ವೀರಂ ಸಿನಿಮಾ ಕನ್ನಡ ರಿಮೇಕ್ ಆಗಿರುವ ಒಡೆಯ ಸಿನಿಮಾವನ್ನು ಎಂ.ಡಿ ಶ್ರೀಧರ್ ನಿರ್ದೇಶಿಸಿದ್ದಾರೆ. ದರ್ಶನ್ ಅವರ ಬುಲ್ ಬುಲ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಶ್ರೀಧರ್ ಈಗ ‘ಒಡೆಯ’ ನ ದರ್ಶನ ಮಾಡಿಸುತ್ತಿದ್ದಾರೆ.
ಗಣೇಶ ಹಬ್ಬದ ಪ್ರಯುಕ್ತ ಒಡೆಯ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಒಡೆಯನ ದರ್ಶನ ಪಡೆದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹರಿದಾಡುತ್ತಿದೆ. ದರ್ಶನ್ ಅಭಿಮಾನಿಗಳ ವಾಟ್ಸ್​ ಆ್ಯಪ್ ಸ್ಟೇಟಸ್ ತುಂಬೆಲ್ಲಾ ಒಡೆಯನ್ನದೇ ಹವಾ..!

Share post:

Subscribe

spot_imgspot_img

Popular

More like this
Related

ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !

ಕಳೆದ ವಾರದ ಕನ್ನಡ ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ...

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ ದೇವನಹಳ್ಳಿಬೆಂಗಳೂರು: ಕೆಂಪೇಗೌಡ...

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್ ಕ್ರೈಂ ತನಿಖೆ

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್...

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ ಬೆಂಗಳೂರು:ರಾಜ್ಯದ...