ಕಳೆದ ಮೂರು ದಿನಗಳಿಂದ ಇಡಿ ವಿಚಾರಣೆ ನಡೆಯುತ್ತಿದ್ದು ನವದೆಹಲಿಯಲ್ಲಿ ಬೀಡುಬಿಟ್ಟಿರುವ ಡಿಕೆ ಶಿವಕುಮಾರ್ ಅವರು ಇಂದು ಗಣೇಶ ಹಬ್ಬದ ಪ್ರಯುಕ್ತವಾಗಿ ಅವರ ತಂದೆಗೆ ಪೂಜೆ ಸಲ್ಲಿಸಿಲ್ಲವೆಂದು ಕಣ್ಣೀರು ಹಾಕಿದ್ದಾರೆ.
ನೋಟ್ ಬ್ಯಾನ್ ಆದ ಸಮಯದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆಂದು ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಕಳೆದ ಮೂರು ದಿನಗಳಿಂದ ಇಡಿ ಅಧಿಕಾರಿಗಳ ವಿಚಾರಣೆ ನಡೆಸುತ್ತಿದ್ದರು.
ಪ್ರತಿ ವರ್ಷದಂತೆ ಕುಟುಂಬ ಸಮೇತವಾಗಿ ಹಿರಿಯರಿಗೆ ಎಡೆಯಿಟ್ಟು ಪೂಜೆ ಸಲ್ಲಿಸುವುದು ಅವರ ಸಂಪ್ರದಾಯದಂತೆ.
ಆದರೆ ಇಂದು ಇಡಿ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಇಡಿ ಅಧಿಕಾರಿಗಳು ಡಿಕೆಶಿ ಅವರಿಗೆ ಮನೆಗೆ ಹೋಗುವ ಅವಕಾಶ ಕೊಟ್ಟಿಲ್ಲ ಆದ ಕಾರಣದಿಂದ ಡಿಕೆ ಶಿವಕುಮಾರ್ ಅವರು ಮನನೊಂದು ಕಣ್ಣೀರಿಟ್ಟಿದ್ದಾರೆ.
ಆದರೆ ಪುತ್ರ ಆಕಾಶ್ ಕೆಂಪೇಗೌಡ ತನ್ನ ಕುಟುಂಬದ ಜೊತೆ ಹೋಗಿ ಕನಕಪುರಕೆ ಹೋಗಿ ಎಡೆಯಿಟ್ಟು ಪೂಜೆ ಸಲ್ಲಿಸಿದ್ದಾರೆ.
ಹಬ್ಬದ ದಿನವಾದ ಇಂದೂ ಶಿವಕುಮಾರ್ ಅವರ ವಿಚಾರಣೆಯನ್ನು ಇ.ಡಿ. ಅಧಿಕಾರಿಗಳು ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಚಾರಣೆ ಆರಂಭವಾಗಲಿದೆ. ಡಿ.ಕೆ. ಶಿವಕುಮಾರ್ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ಕೂಡ ದೆಹಲಿಯಲ್ಲಿರುವುದರಿಂದ ಅವರೂ ಸಹ ಈ ಪೂಜಾ ವಿಧಿಯಲ್ಲಿ ಭಾಗವಹಿಸಲು ಆಗುತ್ತಿಲ್ಲ.