ಸಾಹೋ ಕಳೆದ ವಾರ ಬಿಡುಗಡೆಯಾಗಿ ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಚಿತ್ರ. ಚಿತ್ರಕ್ಕೆ ಎಷ್ಟೇ ನೆಗೆಟಿವ್ ಕಾಮೆಂಟ್ಸ್ ಬಂದರೂ ಸಹ ಕಲೆಕ್ಷನ್ ಮಾತ್ರ ಚಿಂದಿ.! ಹೀಗೆ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಕೋಟಿ ಕೋಟಿ ಬಾಚ್ತಾ ಇರೋ ಸಾಹೋ ಚಿತ್ರದ ವಿರುದ್ಧ ಇದೀಗ ಫ್ರೀಮೇಕ್ ಆರೋಪ ಕೇಳಿಬಂದಿದೆ. ಹೌದು ಪ್ರೆಂಚ್ ಚಿತ್ರದ ನಿರ್ದೇಶಕ ಜೆರೋಮ್ ಸಲ್ಲೇ ಈ ರೀತಿಯ ಆರೋಪವನ್ನು ಮಾಡಿದ್ದಾರೆ.
ಜೆರೋಮ್ ನಿರ್ದೇಶನದ ಲಾರ್ಗೋ ವಿಂಚ್ ಚಿತ್ರವನ್ನು ಕದ್ದು ಸಾಹೋ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ನನ್ನ ಸಿನಿಮಾ ಮಾತ್ರವಲ್ಲದೆ ನನ್ನ ವರ್ಕ್ ಅನ್ನೂ ಸಹ ನೀವು ಕಾಪಿ ಮಾಡಿದ್ದೀರಿ. ಕಾಪಿಯನ್ನಾದರೂ ಸರಿಯಾಗಿ ಮಾಡಿದ್ದೀರಾ? ಎಂದು ಜೆರೋಮ್ ಟ್ವಿಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ನೆಗೆಟಿವ್ ಕಾಮೆಂಟ್ ಗಳನ್ನು ಎದುರಿಸುತ್ತಿದ್ದ ಸಾಹೋ ಚಿತ್ರ ಇದೀಗ ಕದ್ದ ಮಾಲು ಎಂಬ ಆರೋಪಕ್ಕೂ ಸಿಲುಕಿದೆ.