ED ಅಧಿಕಾರಿಗಳು ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನು ಎಡಬಿಡದೇ ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ನಿನ್ನೆಯೂ ಸಹ ಗೌರಿ ಗಣೇಶ ಹಬ್ಬ ಇದ್ದರೂ ಡಿಕೆಶಿಯವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ತಮ್ಮ ತಂದೆಗೆ ಎಡೆ ಇಡಲೂ ಸಹ ಅನುವು ಮಾಡಿಕೊಡದೇ ವಿಚಾರಣೆ ನಡೆಸಿದ್ದಾರೆ ಎಂದು ಡಿಕೆಶಿ ಕಣ್ಣೀರು ಹಾಕಿದ್ದರು.
ಇನ್ನು ಈ ವಿಚಾರದ ಬಗ್ಗೆ ಇದೀಗ ಬಿಜೆಪಿಯ ಶ್ರೀರಾಮುಲು ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಾಜಕೀಯ ವಿಷಯವಾಗಿ ಈ ಹಿಂದೆ ಸಾಕಷ್ಟು ಬಾರಿ ಡಿಕೆಶಿಯವರ ಬಗ್ಗೆ ಮಾತನಾಡಿದ್ದೇನೆ & ಅವರೂ ನನ್ನ ಬಗ್ಗೆ ಮಾತನಾಡಿದ್ದರು. ಆದರೆ ನಿನ್ನೆ ಅವರ ಕಣ್ಣೀರನ್ನು ಕಂಡು ನನಗೆ ತುಂಬಾ ಬೇಸರ ಆಯಿತು , ಇಷ್ಟು ದಿನ ನಾನು ಅವರ ಬಗ್ಗೆ ಆಡಿದ ಮಾತುಗಳ ಬಗ್ಗೆ ಡಿಕೆಶಿಯವರಲ್ಲಿ ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.