ಕಳೆದ ಎರಡು ಮೂರು ದಿನಗಳಿಂದ ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ನಿರಂತರವಾಗಿ ವಿಚಾರಣೆ ಮಾಡುತ್ತಿದ್ದರು. ದೆಹಲಿಯ ಫ್ಲ್ಯಾಟ್ ಒಂದರಲ್ಲಿ ಪತ್ತೆ ಆಗಿದ್ದ ಅಕ್ರಮ ಹಣದಿಂದಾಗಿ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು..
ನಿರಂತರವಾದ ವಿಚಾರಣೆ ನಂತರ ಇದೀಗ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಾನು ಯಾವುದೇ ತಪ್ಪನ್ನೂ ಮಾಡಿಲ್ಲ ಎಂದು ವಾದಿಸುತ್ತಿದ್ದ ಡಿಕೆಶಿ ಅವರು ಇಂದು ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲಾಗದೇ ಸೋತಿದ್ದು ಪರಿಣಾಮ ಬಂಧನಕ್ಕೊಳಗಾಗಿದ್ದಾರೆ.