ನಿರಂತರವಾದ ವಿಚಾರಣೆ ನಂತರ ಇದೀಗ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಾನು ಯಾವುದೇ ತಪ್ಪನ್ನೂ ಮಾಡಿಲ್ಲ ಎಂದು ವಾದಿಸುತ್ತಿದ್ದ ಡಿಕೆಶಿ ಅವರು ಇಂದು ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲಾಗದೇ ಸೋತಿದ್ದು ಪರಿಣಾಮ ಬಂಧನಕ್ಕೊಳಗಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಬಂದ್ ವಾತಾವರಣದಂತಾಗಿದೆ , ರಾಮನಗರದ ಎಲ್ಲಾ ಬಾರ್ ಗಳು ಮುಚ್ಚಲಾಗಿದೆ ಮುಂಜಾಗ್ರತ ಕ್ರಮವಾಗಿ ರಾಮನಗರ ಜಿಲ್ಲೆಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನ ಆದೇಶ ನೀಡಿದ್ದಾರೆ.