ರಾಮ್ ಗೋಪಾಲ್ ವರ್ಮಾ ಅವರ ಎಲ್ಲಾ ಶಿಕ್ಷಕರು ಅವರನ್ನು ಉತ್ತಮ ವಿದ್ಯಾರ್ಥಿ ಮತ್ತು ಉತ್ತಮ ಮನುಷ್ಯನನ್ನಾಗಿ ಮಾಡುವಲ್ಲಿ ವಿಫಲರಾಗಿದ್ದಾರಂತೆ. ಆದ್ದರಿಂದ, ಶಿಕ್ಷಕರ ದಿನದ ಬಗ್ಗೆ ಏನು ಹೇಳಬೇಕೆಂದು ನನಗೆ ತಿಳಿದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಅವರಂತಹ ಕೆಟ್ಟ ವಿದ್ಯಾರ್ಥಿಯನ್ನು ಉತ್ತಮ ವಿದ್ಯಾರ್ಥಿಯಾಗಿ ಪರಿವರ್ತಿಸುವುದು ಉತ್ತಮ ಶಿಕ್ಷಕರ ಕೆಲಸ ಎಂಬ ತರ್ಕವನ್ನು ವರ್ಮಾ ಮಂಡಿಸಿದ್ದಾರೆ.ಇದೀಗ ರಾಮ್ ಗೋಪಾಲ್ ವರ್ಮಾ ಅವರ ಈ ಟ್ವೀಟ್ ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದು, ಮತ್ತೆ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ