ಡಿ.ಕೆ. ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಅವರ ನಡುವೆ ಅಂತರ ಹೆಚ್ಚಾಗಿತ್ತು.ಅದು ರಾಜಕೀಯದಲ್ಲೇ ಪರಸ್ಪರ ಡಿಕೆ ಶಿವಕುಮಾರ್ ಹಾಗೂ ಜಾರಕಿಹೊಳಿಯವರು ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು ಎಂದು ಇಂದು ಜಾರಕಿಹೊಳಿಯವರು ಹೇಳಿದ ಹೇಳಿಕೆಯ ಮೂಲಕ ತಿಳಿಯುತ್ತದೆ .
ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ಬಂಧಿಸಿದ ಬಳಿಕ ಚಿತ್ರಣವೇ ಬದಲಾಗಿದೆ. ಡಿಕೆಶಿ ಅವರಿಗೆ ಪಕ್ಷಾತೀತವಾಗಿ ಅನೇಕ ನಾಯಕರು ಧೈರ್ಯ ಹೇಳಿದ್ದಾರೆ.ಡಿ.ಕೆ. ಶಿವಕುಮಾರ್ ನನ್ನ ಉತ್ತಮ ಗೆಳೆಯ, ಕಷ್ಟಕಾಲದಲ್ಲಿ ನಾನು ಅವರ ಜೊತೆಗೆ ಇರುತ್ತೇನೆ ಎಂದು ತಿಳಿಸಿದ್ದಾರೆ.