ನಿರ್ವಾಹಕನೊಬ್ಬನ ಮಗಳು ಮೃತ ಪಟ್ಟಿದ್ದರೂ ಸಹ ಆ ವಿಷಯವನ್ನು ಅಧಿಕಾರಿಗಳು ಆತನಿಗೆ ತಿಳಿಸದೇ ಕೆಲಸಕ್ಕೆ ಕಳುಹಿಸಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಂಸ್ಥೆ ಅಧಿಕಾರಿಗಳು ಈ ಹೀನ ಕ್ರತ್ಯ ಮಾಡಿದ್ದಾರೆ.
ನಿರ್ವಾಹಕನ 11 ವರ್ಷದ ಮಗಳು ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾಳೆ. ಈ ವಿಷಯವನ್ನು ಡಿಪೋಗೆ ಫೋನ್ ಮಾಡಿ ಮನೆಯವರು ತಿಳಿಸಿದ್ದಾರೆ. ಆದರೆ ಈ ವಿಷಯವನ್ನು ಆ ನಿರ್ವಾಹಕನಿಗೆ ತಿಳಿಸದೇ ಕೆಲಸಕ್ಕೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಮಗಳ ಅಂತಿಮ ದರ್ಶನವನ್ನೂ ಸಹ ಮಾಡಲಾಗದ ಪರಿಸ್ಥಿತಿ ಆತನಿಗೆ ಎದುರಾಗಿದೆ.