ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೇ ಹಲವಾರು ಪರಭಾಷೆಗಳಲ್ಲಿಯೂ ಸಹ ಅಭಿನಯಿಸಿರುವ ಅಪ್ಪಟ ಕನ್ನಡದ ಸ್ಟಾರ್ ನಟ. ಅದು ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ ತೆಲುಗು , ತಮಿಳು , ಹಿಂದಿ ಭಾಷೆಗಳಲ್ಲಿಯೂ ಸಹ ಈಗಾಗಲೇ ಅಭಿನಯಿಸಿದ್ದಾರೆ. ಇನ್ನು ಅವರ ಅಭಿನಯದ ಪೈಲ್ವಾನ್ ಚಿತ್ರ ಸಹ ಇದೀಗ ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತಿದೆ.
ಹೀಗಾಗಿ ಬೇರೆ ಭಾಷೆಯ ಅವತರಣಿಕೆಗಳಿಗೆ ಪ್ರಚಾರದಲ್ಲಿ ಕಿಚ್ಚ ಸುದೀಪ್ ಅವರು ತೊಡಗಿದ್ದಾರೆ. ಇನ್ನು ನಿನ್ನೆಯಷ್ಟೇ ಹೈದರಾಬಾದ್ ನಲ್ಲಿ ಪೈಲ್ವಾನ್ ತೆಲುಗು ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಕಿಚ್ಚ ಸುದೀಪ್ ಅವರು ತೆಲುಗು ನೆಲ ಆದರೂ ಸಹ “ಎಲ್ಲರಿಗೂ ನಮಸ್ಕಾರ” ಎಂದು ಕನ್ನಡದಲ್ಲಿಯೇ ಮಾತನ್ನು ಆರಂಭಿಸಿದರು. ಇದನ್ನು ಕನ್ನಡಿಗರು ಕಿಚ್ಚ ಸುದೀಪ್ ಅವರ ಕನ್ನಡ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಸುದೀಪ್ ಅವರು ಈ ರೀತಿ ಕನ್ನಡ ಪ್ರೇಮ ಮೆರೆದಿರುವುದು ಇದೇ ಮೊದಲನೇ ಬಾರಿ ಅಲ್ಲ.. ಈ ಹಿಂದೆ ಸಾಕಷ್ಟು ಬಾರಿ ಬೇರೆ ಭಾಷೆಯ ಚಿತ್ರಗಳ ಕಾರ್ಯಕ್ರಮಗಳಿಗೆ ತೆರಳಿದಾಗ ಕನ್ನಡದಲ್ಲಿಯೇ ಮಾತನಾಡಿದ್ದರು.